Tuesday, February 25, 2025
Tuesday, February 25, 2025

ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ಉಚಿತ ತರಬೇತಿ

ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ಉಚಿತ ತರಬೇತಿ

Date:

ಬ್ರಹ್ಮಾವರ: ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ, ಇಂದು ಆನೇಕ ಯುವಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕ್‌ಗಳ ಸಹಯೋಗದೊಂದಿಗೆ ನಡೆಯುವ ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಪಂಚಾಯತ್, ಉಡುಪಿ ಇವರ ವತಿಯಿಂದ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್ ನೊಂದಿಗೆ ನಿರುದ್ಯೋಗಿ ಯುವಕ- ಯುವತಿರಿಗೆ ಸಂಸ್ಥೆಯಲ್ಲಿ ಫಾಸ್ಟ್ ಪುಡ್ ತಯಾರಿಕೆ, ಕ್ಯಾಂಡಲ್ ತಯಾರಿಕೆ, ಕೃತಕ ಆಭರಣಗಳ ತಯಾರಿಕೆ, ಹೈನುಗಾರಿಕೆ ಮತ್ತು ಎರಹುಳ ಗೊಬ್ಬರ ತಯಾರಿಕೆ ತರಬೇತಿಗಳನ್ನು ಆಯೋಜಿಸಿದ್ದು ಈ ತರಬೇತಿ ಪಡೆಯಲು ಬಯಸುವರು 18 ರಿಂದ 45 ವರ್ಷದ ಒಳಗಿನವರು ಗ್ರಾಮೀಣ ಭಾಗದ ಬಿ.ಪಿ.ಎಲ್ ಕುಟುಂಬದ ಸದಸ್ಯರಾಗಿ ಇರಬೇಕು. ಕನ್ನಡ ಓದಲು ಬರೆಯಲು ಬರಬೇಕು.

ಹೆಸರು, ವಿಳಾಸ, ಮೊಬೈಲ್ (ವಾಟ್ಸಪ್‌ನಂ), ತರಬೇತಿ ಪಡೆಯಲು ಇಚ್ಚಿಸುವವರು ತಕ್ಷಣ ತರಬೇತಿಗೆ ಅರ್ಜಿ ಬರೆದು ಇದರ ಜೊತೆ ಬಿ.ಪಿ.ಯಲ್.ರೇಶನ್ ಕಾರ್ಡ, ಆಧಾರ ಕಾರ್ಡ್ ಇರಿಸಿ ತಕ್ಷಣ ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಿ ಕೊಡಬಹುದು.

ವಾಟ್ಸಪ್ ನಂ. 9591233748 / 9611544930 / 9448348569 / 9844086383 / 9632561145/ 8861325564

ಇಮೇಲ್ ವಿಳಾಸ- [email protected] ವೆಬ್ ಸೈಟ್ ವಿಳಾಸ- http://www.rudsetitraining.org ಆನ್ ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು ಎಂದು ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!