Sunday, November 24, 2024
Sunday, November 24, 2024

ವಿದ್ಯುತ್ ಮಾರ್ಗದಲ್ಲಿ ಎಚ್ಚರ ವಹಿಸಿ

ವಿದ್ಯುತ್ ಮಾರ್ಗದಲ್ಲಿ ಎಚ್ಚರ ವಹಿಸಿ

Date:

ಉಡುಪಿ: ಕುಂದಾಪುರ ವಿಭಾಗದ ಬೈಂದೂರು ಉಪವಿಭಾಗದ ಗೋಳಿಹೊಳೆ ಗ್ರಾಮದ ಹಾಲ್ಕಲ್ ಎಂಬಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೊಲ್ಲೂರು ವಿದ್ಯುತ್ ಉಪಕೇಂದ್ರಕ್ಕೆ, ವಿದ್ಯುತ್ ಪೂರೈಕೆ ಸಲುವಾಗಿ ನಾವುಂದ ವಿದ್ಯುತ್ ಉಪಕೇಂದ್ರದಿಂದ ನಿರ್ಮಾಣಗೊಂಡಿರುವ 20.84 ಕಿ.ಮೀ ಉದ್ದದ 33 ಕೆವಿ ವಿದ್ಯುತ್ ಮಾರ್ಗವು ಸೆಪ್ಟಂಬರ್ 29 ರ ನಂತರ ಯಾವುದೇ ದಿನದಲ್ಲಿ ಚೇತನಗೊಳ್ಳಲಿರುವುದು.

ಆದುದರಿಂದ ಕೊಲ್ಲೂರು ಹೊಸ ವಿದ್ಯುತ್ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜಾಗುವ ಮಾರ್ಗವು ಹಾದುಹೋಗುವ ಹೇರೂರು, ನಾವುಂದ, ಉಳ್ಳೂರು-11, ಉಪ್ರಳ್ಳಿ, ಕಂಬದಕೋಣೆ, ಶೇಡಿಗುಡ್ಡೆ, ಹೇರಂಜಾಲು, ಕಾಲ್ತೋಡು, ಬಲಗೋಣ, ಅರೆಶಿರೂರು, ಎಲ್ಲೂರು, ಹಾಲ್ಕಲ್, ಗೋಳಿಹೊಳೆ ಗ್ರಾಮಗಳ ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ಸ್ಥಳೀಯರು ಸಂಬಂಧಪಟ್ಟ ಮೆಸ್ಕಾಂ ಕಛೇರಿಯ ಗಮನಕ್ಕೆ ತರದೇ ಮಾರ್ಗದ ಹಾದಿಯಲ್ಲಿ ಯಾವುದೇ ಮಣ್ಣು ಅಗೆತ, ಬೆಂಕಿ ಹಚ್ಚುವಿಕೆ, ಕಂಬ ಹತ್ತುವುದು, ಕಂಬಗಳನ್ನು ಬಳಸಿ ಇತರ ಚಟುವಟಿಕೆಗಳನ್ನು ನಡೆಸುವುದು ಇತ್ಯಾದಿ ನಿರ್ಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಬಾರದಾಗಿ ಈ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಸೂಚನೆ/ನಿರ್ದೇಶನಗಳನ್ನು ಕಡೆಗಣಿಸಿ, ಈ ಪ್ರದೇಶಗಳಲ್ಲಿ ಯಾವುದೇ ನಿರ್ಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಆಗಬಹುದಾದ ಕಷ್ಟ-ನಷ್ಟಗಳಿಗೆ ಸಂಬಂಧಿಸಿದವರೇ ಜವಾಬ್ದಾರರಾಗಿರುತ್ತಾರೆ ಮತ್ತು ಇದರಿಂದ ಆಗಬಹುದಾದ ವಿದ್ಯುತ್/ಇತರೇ ಅವಘಡಗಳಿಗೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿಯು ಜವಾಬ್ದಾರಿಯಾಗಿರುವುದಿಲ್ಲ, ಅದ್ದರಿಂದ ಸಾರ್ವಜನಿಕರು ಗಮನಿಸಿ, ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!