Friday, January 24, 2025
Friday, January 24, 2025

ಉಡುಪಿ ಅಂಚೆ ವಿಭಾಗ- ಕ್ಷಯ ಮುಕ್ತ ಭಾರತ ಅಭಿಯಾನ

ಉಡುಪಿ ಅಂಚೆ ವಿಭಾಗ- ಕ್ಷಯ ಮುಕ್ತ ಭಾರತ ಅಭಿಯಾನ

Date:

ಉಡುಪಿ: ಯಾವುದೇ ಒಂದು ಕಾಯಿಲೆಯನ್ನು ಗುಣಪಡಿಸುವ ಬದಲು ಅದು ಬರದಂತೆ ತಡೆಗಟ್ಟುವುದು ಅತ್ಯುತ್ತಮ ವಿಧಾನ. ಹಾಗಾಗಿ ಪ್ರತಿಯೊಬ್ಬರೂ ಯಾವುದೇ ಒಂದು ಕಾಯಿಲೆಯ ಬಗ್ಗೆ ತಿಳಿದುಕೊಂಡು ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಉಡುಪಿ‌ ಕ್ಷಯ ಘಟಕ, ಉಡುಪಿ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಚೇರಿಯ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಪ್ರವೀಣ್ ಶೆಟ್ಟಿ ಹೇಳಿದರು.

ಅವರು ಭಾರತೀಯ ಅಂಚೆ ಇಲಾಖೆ ಉಡುಪಿ ಅಂಚೆ ವಿಭಾಗದ ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಹಮ್ಮಿಕೊಂಡಿದ್ದ ಕ್ಷಯರೋಗ ಮುಕ್ತ ಭಾರತ ಅಭಿಯಾನದ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.

ಎಷ್ಟೋ ಕಾಯಿಲೆಗಳು ಉಲ್ಬಣಗೊಳ್ಳುವುದು ಸಕಾಲಕ್ಕೆ ಸೂಕ್ತ ಚಿಕಿತ್ಸೆಯ ಕೊರತೆಯಿಂದಾಗಿ. ಹಾಗಾಗಿ ಎಲ್ಲರೂ ಒಂದು ಕಾಯಿಲೆ ಬರಲು ನಿಜವಾದ ಕಾರಣ ಹಾಗು ಅದು ಹರಡುವ ಸಂಭವನೀತೆಯನ್ನು ಮೊದಲು ತಿಳಿದುಕೊಂಡು ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಕಂಡುಕೊಂಡಲ್ಲಿ ಯಾವುದೇ ಕಾಯಿಲೆಗಳನ್ನು ಕೂಡ ಗುಣಪಡಿಸಲಾಗುತ್ತದೆ, ಅಲ್ಲದೆ ಸಾವು ನೋವುಗಳನ್ನು ಕೂಡ ಗೆಲ್ಲಬಹುದು ಎಂದು ಹೇಳಿದರು.

ಮಾಹಿತಿ ಶಿಬಿರದಲ್ಲಿ ಆರೋಗ್ಯ ಇಲಾಖಾ ಕಾರ್ಯಕರ್ತೆ ಸುಮಲತಾ ಉಪಸ್ಥಿತರಿದ್ದರು. ಉಡುಪಿ ಅಂಚೆ ವಿಭಾಗದ ಆಂಚೆ ಅಧೀಕ್ಷಕರಾದ ನವೀನ್ ಚಂದ್ರರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್ ವಂದಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆಪಾಲಕ ಗುರುಪ್ರಸಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜ.25: ಉಡುಪಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಜ.24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಉಡುಪಿ...

ಹಿರಿಯಡಕದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲಾಗುವುದು: ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ

ಉಡುಪಿ, ಜ.24: ಹಿರಿಯಡಕದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲಾಗುವುದು...

ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳಿಗೆ ಆಹ್ವಾನ

ಉಡುಪಿ, ಜ.24: ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಇವರನ್ನು ನವದೆಹಲಿಯ...

ಸಂಜೆಯ ಆಕಾಶ ಈಗ ವೀಕ್ಷಣೆಗೆ ಯೋಗ್ಯ

ಈ ಕೆಲವು ದಿನಗಳು ಸಂಜೆಯ ಆಕಾಶದಲ್ಲಿ ಬರಿಗಣ್ಣಿಗೆ ನಾಲ್ಕು ಗ್ರಹಗಳು ಕಾಣುತ್ತಿವೆ....
error: Content is protected !!