Sunday, October 13, 2024
Sunday, October 13, 2024

ಹೊಂಡ ಗುಂಡಿಯ ರಸ್ತೆ; ಅಂಬುಲೆನ್ಸಿನಲ್ಲಿ ಹೆರಿಗೆ!

ಹೊಂಡ ಗುಂಡಿಯ ರಸ್ತೆ; ಅಂಬುಲೆನ್ಸಿನಲ್ಲಿ ಹೆರಿಗೆ!

Date:

ಉಡುಪಿ: ಹೊಂಡ ಗುಂಡಿಗಳಿರುವ ರಸ್ತೆಯಲ್ಲಿ ಸೈರನ್ ಮೊಳಗಿಸುತ್ತ, ನೀಲಿ ಲೈಟ್ ಬೆಳಗಿಸಿ, ವಾಲಿಕೊಂಡು ಬರುತ್ತಿರುವ ಅಂಬುಲೇನ್ಸ್ ನೋಡಲು, ಜನರು ಏನಾಯಿತು..! ಎಂದು ಗಾಬರಿಗೊಳಗಾಗಿ, ರಸ್ತೆ ಉದ್ದಕ್ಕೂ ನಿಂತು ನೋಡುತ್ತಿದ್ದರು. ಅವರೆಲ್ಲರೂ ನೋಡುತ್ತಿದ್ದಂತೆಯೇ ಅಂಬುಲೆನ್ಸ್ ನಡು ರಸ್ತೆಯಲ್ಲಿ ನಿಂತಿತು..!

ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆಯನ್ನು ಅಂಬುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಸಂಪೂರ್ಣ ಹದಗೆಟ್ಟ ರಸ್ತೆಯಿಂದಾಗಿ, ಗರ್ಭಿಣಿ ಮಹಿಳೆ ಅಂಬುಲೆನ್ಸ್ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು..! ಈ ಘಟನೆಯು ಉಡುಪಿ ಗುಂಡಿಬೈಲಿನಿಂದ ಅಡ್ಕದಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ ಗುರುವಾರ ನಡೆದಿದೆ.

ಇದು ಸತ್ಯ ಘಟನೆ ಅಲ್ಲ..! ಕೆಲವು ವರ್ಷಗಳಿಂದ ಹದಗೆಟ್ಟಿರುವ ರಸ್ತೆಯ ಪರಿಸ್ಥಿತಿ ಕುರಿತು ಆಡಳಿತ ವ್ಯವಸ್ಥೆಗಳ ಗಮನ ಸೆಳೆಯಲು, ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ತಾಯಿ ಮಗುವಿನ ಗೊಂಬೆಗಳನ್ನು ಬಳಸಿಕೊಂಡು ಮಾಡಿರುವ ಅಣಕು ಪ್ರದರ್ಶನ.

ಇಲ್ಲಿಯ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲಾಗದ ಅಯೋಮಯ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಗೆ ರೋಗಿಗಳು ಸಾಗಿಸುವುದು ಸವಾಲಿನ ಕೆಲಸವಾಗಿದೆ. ಶಾಲಾ ವಿದ್ಯಾರ್ಥಿಗಳು ನಡೆದಾಡಲು ಅಸಾಧ್ಯವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ರಸ್ತೆ ಕಾಂಕ್ರಿಟೀಕರಣ ಮಾಡುವಂತೆ ಸಮಾಜಸೇವಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾತೃಹೃದಯಿ ರತನ್ ಟಾಟಾ

ಗಣಿತನಗರ, ಅ.13: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಅಗಲಿದ ಉದ್ಯಮ...

ಕಾರಂತ ದೀವಿಗೆ 2024

ಕುಂದಾಪುರ, ಅ.13: ಶ್ರೀ ಶಾರದಾ ಕಾಲೇಜು ಬಸ್ಸೂರು ಕುಂದಾಪುರ ಇಲ್ಲಿನ ಕನ್ನಡ...

ಮನಸ್ಸಿನಲ್ಲಿ ಸಹಾನುಭೂತಿ ನೆಲೆಸಲಿ: ವಿವೇಕ್ ಆಳ್ವ

ವಿದ್ಯಾಗಿರಿ, ಅ.13: ಮನೋವಿಜ್ಞಾನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಹಾನುಭೂತಿಯ ನೆಲೆಸಿರಬೇಕು ಎಂದು ಆಳ್ವಾಸ್...

ಒಟಿಟಿ ನಿಯಂತ್ರಿಸಲು ಕಠಿಣ ಕಾನೂನಿನ ಅಗತ್ಯವಿದೆ: ಆರ್.ಎಸ್.ಎಸ್. ಸರಸಂಘಚಾಲಕ್ ಮೋಹನ್ ಭಾಗವತ್

ನಾಗಪುರ, ಅ.13: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಉತ್ಸವ ನಾಗಪುರದಲ್ಲಿ ಶನಿವಾರ...
error: Content is protected !!