ಉಡುಪಿ: 2021-22 ನೇ ಸಾಲಿನ ನಗರಸಭಾ ಅನುದಾನದ ಶೇ. 5ರ ನಿಧಿಯಡಿ 75 ಶೇಕಡಕ್ಕಿಂತ ಹೆಚ್ಚಿನ ವಿಕಲಚೇತನರಿಗೆ ಟ್ರೈಸ್ಕೂಟರ್ ಹಾಗೂ ವೀಲ್ ಚೇರ್ ಗಳ ವಿತರಣಾ ಕಾರ್ಯಕ್ರಮ ಇಂದು ನಡೆಯಿತು. ಶಾಸಕ ಕೆ. ರಘುಪತಿ ಭಟ್ ಫಲಾನುಭವಿಗಳಿಗೆ ಟ್ರೈಸ್ಕೂಟರ್ ಹಾಗೂ ವೀಲ್ ಚೇರ್ ವಿತರಿಸಿದರು.
ನಗರಸಭಾ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಪೌರಾಯುಕ್ತರಾದ ಉದಯ್ ಶೆಟ್ಟಿ ಹಾಗೂ ನಗರಸಭೆಯ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.