ಕುಂದಾಪುರ: ಹಾಲಾಡಿಯ ಮಧೂರಿಯಲ್ಲಿ ಅಸಂಘಟಿತ ಹಾಗೂ ಕಟ್ಟಡ ಕಾರ್ಮಿಕರಿಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು. ಭಾರತೀಯ ಮಜ್ದೂರ್ ಸಂಘ ಉಡುಪಿ ಜಿಲ್ಲೆ, ಮೈತ್ರಿ ಯುವಕ ಮಂಡಲ, ಸ್ವಾವಲಂಬಿ ಭಾರತ್ ಇದರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಭಾರತೀಯ ಮಜ್ದೂರ್ ಸಂಘದ ಹಿರಿಯರಾದ ನಾರಾಯಣ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಅವರು ಕಟ್ಟಡ ಕಾರ್ಮಿಕರಿಗೆ ಇರುವ ಸೌಲಭ್ಯಗಳು ನೋಂದಣಿ ಬಗ್ಗೆ ಹಾಗೂ ಅಸಂಘಟಿತ ಕಾರ್ಮಿಕರ ನೋಂದಣಿ ಇ- ಶ್ರಮಕಾರ್ಡ್ ಮಾಡಿಸುವುದರ ಬಗ್ಗೆ ಹಾಗೂ ಶ್ರಮಯೋಗಿ ಪೆನ್ಷನ್ ಯೋಜನೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಉಡುಪಿ ನಗರಸಭಾ ಸದಸ್ಯ ಸ್ವಾವಲಂಬಿ ಭಾರತ ಅಭಿಯಾನದ ಜಿಲ್ಲಾ ಪ್ರಮುಖರಾದ ವಿಜಯ್ ಕೊಡವೂರು ಭಾರತೀಯ ಮಜ್ದೂರ್ ಸಂಘದ ಅವಶ್ಯಕತೆ ಹಾಗೂ ಸ್ವಾವಲಂಬಿ ಭಾರತದ ಉದ್ದೇಶದ ಕುರಿತು ಮಾತನಾಡಿದರು.
ಭಾರತೀಯ ಮಜ್ದೂರ್ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ರತ್ನಾಕರ್ ದೇವಾಡಿಗ ಶುಭ ಹಾರೈಸಿದರು.
ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಮೈತ್ರಿ ಯುವಕ ಮಂಡಲದ ಅಧ್ಯಕ್ಷರಾದ ಗಣೇಶ ಮೊಗವೀರ ಹಾಗೂ ಹಾಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ದನ ಹಾಲಾಡಿ, ಸದಸ್ಯರಾದ ಗುರುಪ್ರಸಾದ್ ಶೆಟ್ಟಿ, ಗ್ರಾಮ ಒನ್ ನ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು.
ಅಕ್ಷಯ ಅಚಾರ್ಯ ಸ್ವಾಗತಿಸಿ, ಮಧುಸೂಧನ್ ವಂದಿಸಿದರು. ಸುಧೀರ್ ಕಟ್ಟಿನಗುಂಡಿ ಕಾರ್ಯಕ್ರಮ ನಿರೂಪಿಸಿದರು.