ಕಾಪು: ಇತಿಹಾಸ ಪ್ರಸಿದ್ದ ಕಾಪು ಶ್ರೀ ವೆಂಕಟರಮಣ ದೇವಳದಲ್ಲಿ ಇಂದು ವಾರ್ಷಿಕ ಮಹಾಸಭೆ ಹತ್ತು ಸಮಸ್ತರ ಉಪಸ್ಥಿತಿಯಲ್ಲಿ ಜರಗಿತು. ಸಭೆಯಲ್ಲಿ ಸರ್ವಾನುಮತದಿಂದ ನೂತನ ಆಡಳಿತ ಮಂಡಳಿ ಪುನರಾಯ್ಕೆ ಪ್ರಕ್ರಿಯೆ ನಡೆಯಿತು.
ದೇವಳದ ಆಡಳಿತ ಮೊಕ್ತೇಸರರಾಗಿ ಪ್ರಸಾದ್ ಗೋಕುಲದಾಸ್ ಶೆಣೈ ಹಾಗೂ ಮೊಕ್ತೇಸರರಾಗಿ ಸದಾಶಿವ ಕಾಮತ್, ಶ್ರೀಕಾಂತ್ ಭಟ್, ಎಂ. ರಾಜೇಶ್ ಶೆಣೈ, ರಾಮ್ ನಾಯಕ್ ಕಾಪು ಇವರು ಆಯ್ಕೆಯಾದರು. ಮೇಲ್ವಿಚಾರಕ ಮಂಡಳಿ ಸದಸ್ಯರಾಗಿ ಸುನಿಲ್ ಪೈ, ಮೋಹನದಾಸ ಕಿಣಿ, ಕೃಷ್ಣಾನಂದ ನಾಯಕ್, ಚಂದ್ರಕಾಂತ್ ಕಾಮತ್, ರಾಜೇಶ್ ಶೆಣೈ ಮಜೂರ್ ಇವರು ಆಯ್ಕೆಯಾದರು.