ಉಪ್ಪೂರು: ಯುವ ವಿಚಾರ ವೇದಿಕೆ (ರಿ.) ಕೊಳಲಗಿರಿ ಉಪ್ಪೂರು ಇವರ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ಭಾರತೀಯ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಉಪ್ಪೂರು ಗ್ರಾಮದ ನಿವೃತ್ತ ಯೋಧ ರಮೇಶ್ ಪೂಜಾರಿ ತೆಂಕಬೆಟ್ಟು ಧ್ವಜಾರೋಹಣ ನೆರವೇರಿಸಿದರು.
ಗ್ರಾಮೀಣ ಕ್ರೀಡಾ ಸ್ಪರ್ಧಾ ಕಾರ್ಯಕ್ರಮವನ್ನು ಯುವ ಉದ್ಯಮಿ ಸಂದೀಪ್ ನಾಯಕ್ ಉದ್ಘಾಟಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯತುಲ್ಲಾ ಬೇಗ್, ಪಂಚಾಯತ್ ಸದಸ್ಯರಾದ ಅಶ್ವಿನ್ ರೋಚ್, ಸತೀಶ್ ಪೂಜಾರಿ, ದೇಹ ದಾನಿ ಸಮಾಜ ಸೇವಕ ರಮೇಶ್ ಕರ್ಕೇರಾ, ನಿರ್ವತ್ತ ಬ್ಯಾಂಕ್ ಉದ್ಯೋಗಿ ಪ್ರಭಾಕರ್ ನಾಯಕ್, ಮುಂಬೈ ಯುವ ಉದ್ಯಮಿ ಮೈಕಲ್, ವೇದಿಕೆಯ ಹಿರಿಯರಾದ ಮಾಧವ ಪಾಣ, ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ನಾಗೇಶ್, ಉಪ್ಪೂರು ವ್ಯ.ಸೆ.ಸ.ಸಂಘ ಇದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಂದೀಪ್ ಶೆಟ್ಟಿ ಹಾಗೂ ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕೊಳಲಗಿರಿಯ ಪುಷ್ಪಲತಾ ಸಸ್ಯಾಲಯದವರು ನೀಡಿದ ಸಸ್ಯಗಳನ್ನು ಅತಿಥಿ ಗಣ್ಯರಿಗೆ ಸ್ಮರಣಿಕೆಯಾಗಿ ನೀಡಲಾಯಿತು.
ಅಧ್ಯಕ್ಷರಾದ ದಿನೇಶ್ ಶೆಟ್ಟಿ ಸ್ವಾಗತಿಸಿದರು. ಕಾವ್ಯ ಸ್ಪರ್ಧಿಗಳ ಪಟ್ಟಿಯನ್ನು ವಾಚಿಸಿ, ಸದಾಶಿವ ಕುಮಾರ್, ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಕೊಳಲಗಿರಿ ವಂದಿಸಿದರು.