ಉಡುಪಿ: ಕೇಂದ್ರ ಸರಕಾರದ ರೈತ ವಿರೋಧಿ ೩ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕಳೆದ ಸುಮಾರು 425 ದಿನಗಳಿಂದ ಅಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿದ್ದರೂ ಕೇಂದ್ರ ಸರಕಾರ ರೈತರ ಬೇಡಿಕೆಗಳಿಗೆ
ಸ್ಪಂದಿಸಿಲ್ಲ. ಈ ನಡುವೆ ರೈತರು ಉತ್ತರ ಪ್ರದೇಶದ ಲಖೀಮ್ಪುರ ಖೇರಿಯಲ್ಲಿ ರೈತ ಪ್ರತಿಭಟನೆ ವೇಳೆ, ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಅಶೀಶ್ ಮಿಶ್ರಾ ರೈತರ ಮೇಲೆಯೇ ಕಾರು ಚಲಾಯಿಸಿ ನಾಲ್ವರು ರೈತರು ಮೃತಪಟ್ಟಿದ್ದು, ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ತೆರಳಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯವರನ್ನು ಸರಕಾರ ಬಂಧಿಸಿರುವುದು ಖಂಡನೀಯ.
ಉತ್ತರ ಪ್ರದೇಶ ಸರಕಾರ ಪ್ರಿಯಾಂಕರನ್ನು ಕೂಡಲೇ ಬಂಧಮುಕ್ತಗೊಳಿಸದಿದ್ದರೆ ಜಿಲ್ಲಾ ಕಾಂಗ್ರೆಸ್‌ನಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಮುಖಂಡರುಗಳಾದ ವೆರೋನಿಕಾ ಕರ್ನೇಲಿಯೋ, ನವೀನ್‌ಚಂದ್ರ ಜೆ. ಶೆಟ್ಟಿ, ಶ್ಯಾಮಲ ಭಂಡಾರಿ, ಅಲೆವೂರು ಹರೀಶ್ ಕಿಣಿ, ಡಾ ಸುನಿತಾ ಶೆಟ್ಟಿ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ದಿನಕರ್ ಹೇರೂರು, ಶಂಕರ್ ಕುಂದರ್, ಪ್ರಖ್ಯಾತ್ ಶೆಟ್ಟಿ, ಸಂಪಿಗಹಾಡಿ ಸಂಜೀವ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಬಿಪಿನ್‌ಚಂದ್ರ ಪಾಲ್, ಭಾಸ್ಕರ್ ರಾವ್ ಕಿದಿಯೂರು, ದೇವಾನಂದ ಶೆಟ್ಟಿ, ದೇವಕಿ ಸಣ್ಣಯ್ಯ, ಕೀರ್ತಿ ಶೆಟ್ಟಿ, ಹಬೀಬ್ ಆಲಿ, ಕಿಶೋರ್ ಎರ್ಮಾಳ್, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವರ್, ಶಶಿಧರ ಶೆಟ್ಟಿ ಎಲ್ಲೂರು, ಬಿ. ಭುಜಂಗ ಶೆಟ್ಟಿ, ಡೆರಿಕ್ ಡಿಸೋಜಾ, ಅಖಿಲೇಶ್ ಕೋಟ್ಯಾನ್, ಉದ್ಯಾವರ ನಾಗೇಶ್ ಕುಮಾರ್, ಹರೀಶ್ ಶೆಟ್ಟಿ ಪಾಂಗಾಳ, ಜಯರಾಮ್ ನಾಯ್ಕ್, ರೋಶನ್ ಶೆಟ್ಟಿ, ಲೂಯಿಸ್ ಲೋಬೊ, ಗಣೇಶ್ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಯತೀಶ್ ಕರ್ಕೇರಾ, ಸೂರ್ಯ ಸಾಲ್ಯಾನ್, ಶಾಂತಿ ಪಿರೇರಾ, ಚಂದ್ರಾವತಿ ಭಂಡಾರಿ, ಸುಗಂಧಿ ಶೇಖರ್, ಅನಿತಾ ಡಿ’ಸೋಜಾ, ಸೀಮಾ ಮಾರ್ಗರೇಟ್, ನತಾಲಿಯಾ ಮಾರ್ಟಿಸ್, ಹಮದ್, ಲಕ್ಷೀಶ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.