ಮಂಗಳೂರು: ಬಟ್ಟೆ ಬದಲಿಸುವ ಕೊಠಡಿಯಲ್ಲಿ ಕ್ಯಾಮರಾ ಇರಿಸಿ ದೃಶ್ಯಗಳನ್ನು ಸೆರೆ ಹಿಡಿದ ಆರೋಪದ ಮೇರೆಗೆ ನರ್ಸಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯರು ಉಡುಪು ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇರಿಸಿ ದೃಶ್ಯಗಳನ್ನು ಸೆರೆ ಹಿಡಿದ ಆರೋಪದಲ್ಲಿ ಪವನ್ ಕುಮಾರ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿ ಪವನ್ ಕುಮಾರ್ ಈ ಕೃತ್ಯವೆಸಗಿದ ಆರೋಪಿ. ಪವನ್ ಕುಮಾರ್ ಮೂಲತಃ ಕಲಬುರಗಿಯವನಾಗಿದ್ದು, ಬಜಪೆಯಲ್ಲಿ ವಾಸವಾಗಿದ್ದ. ಸ್ಕ್ಯಾನಿಂಗ್ಗೆ ಒಳಗಾಗಲು ಬಂದಿದ್ದ ಯುವತಿ ಉಡುಪು ಬದಲಾಯಿಸುವ ಮೊದಲು ಕೊಠಡಿಯನ್ನು ಸೂಕ್ಷ್ಮ್ಯವಾಗಿ ಗಮನಿಸಿದಾಗ ಕೊಠಡಿಯ ಮೂಲೆಯಲ್ಲಿ ರಹಸ್ಯ ಕ್ಯಾಮರಾ ಇರುವುದು ಗೊತ್ತಾದ ಕೂಡಲೇ ಈ ವಿಷಯವನ್ನು ವೈದ್ಯರ ಗಮನಕ್ಕೆ ತಂದಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಪವನ್ ಕುಮಾರ್ ಕ್ಯಾಮರಾ ಇಟ್ಟಿರುವುದು ಪತ್ತೆಯಾಗಿದೆ.