ಮಂಗಳೂರು: ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಐಕ್ಯೂಎಸಿ ಆಂಡ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕ್ಲಬ್ ಜಂಟಿ ಆಶ್ರಯದಲ್ಲಿ ‘ಬೆಟರ್ ಎನ್ವಿರಾನ್ಮೆಂಟ್-ಬೆಟರ್ ಟುಮಾರೋ’ ಪರಿಸರ ಜಾಗೃತಿ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕನ್ನಡದ ಮೊದಲ ಮಹಿಳಾ ಮೊಟೋ ವ್ಲಾಗರ್ ಖ್ಯಾತಿಯ ಬೆಂಗಳೂರಿನ ಸ್ವಾತಿ ಆರ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿರುವ ಅನಿತಾ ಎಂ ಸಂಪನ್ಮೂಲ ವ್ಯಕ್ತಿಗಳಾಗಿ ತಮ್ಮ ಅಭಿಯಾನವಾದ ‘ಸೇವ್ ಮೆರೈನ್ ಲೈಫ್’ ಬಗ್ಗೆ ಮಾತನಾಡಿದರು. ಕಡಲ ತೀರದ ಸ್ವಚ್ಛತೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಸುಸ್ಥಿರ ಪ್ರವಾಸೋದ್ಯಮದ ಬಗ್ಗೆಯೂ ತಮ್ಮ ಮಾತುಗಳಲ್ಲಿ ಉಲ್ಲೇಖಿಸಿದರು.
ಸಂಸ್ಥೆಯ ನಿರ್ದೇಶಕ ಡಾ. ಟಿ. ಜಯಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪರಿಸರ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕು. ಬೆಂಗಳೂರಿನಿಂದ ಕಾರವಾರದವರೆಗೆ ಇಬ್ಬರೂ ಮಹಿಳಾ ಬೈಕರ್ ಗಳು ನಡೆಸುತ್ತಿರುವ ಅಭಿಯಾನವನ್ನು ಇದೇ ಸಂದರ್ಭದಲ್ಲಿ ಅವರು ಶ್ಲಾಘಿಸಿ ಶುಭ ಹಾರೈಸಿದರು.
ಡೀನ್ ಡಾ. ವಿಜಯ ಕುಮಾರ್, ಸ್ಟುಡೆಂಟ್ ಕೌಂಸಿಲ್ ಅಡ್ವೈಸರ್ ಪ್ರೊ. ಚೇತನ್ ಕುಮಾರ್, ಬೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಮಹೇಶ್ ಪಿ.ಜಿ ಸ್ವಾಗತಿಸಿ, ಉಪನ್ಯಾಸಕಿ ರೋಷೆಲ್ಲಾ ಡಿ’ಕೋಸ್ಟಾ ವಂದಿಸಿದರು. ಎಂ.ಬಿ.ಎ ವಿದ್ಯಾರ್ಥಿನಿ ಆಶ್ರಿತಾ ಎಂ.ಎನ್ ಕಾರ್ಯಕ್ರಮ ನಿರೂಪಿಸಿದರು.