Monday, January 20, 2025
Monday, January 20, 2025

ಗತಕಾಲದ ವೈಭವಕ್ಕೆ ಮರಳುತ್ತಿರುವ ಮಂಗಳೂರಿನ ಇತಿಹಾಸ ಪ್ರಸಿದ್ಧ ಕಾತ್ಯಾಯನೀ ಮಠ

ಗತಕಾಲದ ವೈಭವಕ್ಕೆ ಮರಳುತ್ತಿರುವ ಮಂಗಳೂರಿನ ಇತಿಹಾಸ ಪ್ರಸಿದ್ಧ ಕಾತ್ಯಾಯನೀ ಮಠ

Date:

ಮಂಗಳೂರು: ನಗರದ ಶರವು ದೇವಸ್ಥಾನ ರಸ್ತೆಯಲ್ಲಿರುವ ಶ್ರೀ ಕಾತ್ಯಾಯನೀ ಬಾಣೇಶ್ವರ ಮಠ ಶತಶತಮಾನಗಳಿಗಿಂತಲೂ ಪುರಾತನ ದೇವಸ್ಥಾನವಾಗಿದ್ದು ಮಂಗಳೂರಿನ ವೈದಿಕ ಪರಿವಾರ ತಲೆತಲಾಂತರದಿಂದಲೂ ದೇವಸ್ಥಾನ ನಿರ್ಮಿಸಿ ಪೂಜೆ ನಡೆಸುತ್ತಾ ಬರುತ್ತಿದ್ದಾರೆ.

ದೇವಸ್ಥಾನ ನಿರ್ಮಾಣದ ಶತಮಾನದ ಹಿಂದೆಯೇ ಕಾತ್ಯಾಯನೀ ಮಠದ ಅರ್ಚಕ ಕುಟುಂಬ ಮಂಗಳೂರಿನಲ್ಲಿ ನೆಲೆಸಿದ್ದು ಆಗಿನ ಕಾಲದಿಂದಲೂ ಹೆಚ್ಚು ಪೌರೋಹಿತ್ಯ ವರ್ಗವನ್ನು ಹೊಂದಿದ್ದರು. ಸ್ವಾತಂತ್ರ್ಯದ ಬಳಿಕ ಹುಟ್ಟಿದ ಈ ಪರಿವಾರದವರಲ್ಲಿ ವೈದಿಕ ಪರಂಪರೆಯನ್ನು ಯಾರೂ ಮುಂದುವರೆಸದ ಕಾರಣ ಕಾತ್ಯಾಯನೀ ಗೋಪಾಲ ಭಟ್ಟರು ತಮ್ಮ ಮಿತ್ರವರ್ಗದವರಿಗೆ ಯಜಮಾನವರ್ಗದ ಮನೆಯ ಕರ್ಮಾಂಗದ ಜವಾಬ್ದಾರಿ ನೀಡಿದರು.

ಮುಂದೆ ಹಾಗೆಯೇ ಮುಂದುವರೆದು ಈಗಿನ ಯುವಪೀಳಿಗೆಗೆ ಮೂಲ ಪುರೋಹಿತರ ಬಗ್ಗೆ ತಿಳಿಯದಾಗಿದೆ. ಪೂರ್ವಜರ ಯಜಮಾನವರ್ಗದ ಬಗ್ಗೆ ಈಗಾಗಲೇ ಮಾಹಿತಿ ಕಲೆಹಾಕಲಾಗಿದೆ ಎನ್ನುತ್ತಾರೆ ಈಗಿನ ಕಾತ್ಯಾಯನೀ ಗೋಪಾಲಭಟ್ಟರು. ಕಾತ್ಯಾಯನೀಯೇ ಮತ್ತೊಮ್ಮೆ ಅವರನ್ನು ಸನ್ನಿಧಾನದಲ್ಲಿ ಕರೆಸಿಕೊಳ್ಳುತ್ತಾಳೆ ಎಂಬ ನಂಬಿಕೆ ಅವರದ್ದು.

ಹಿಂದಿನಿಂದಲೂ ಅನೇಕ ಪವಾಡಗಳು, ಕಾರಣೀಕಗಳು ಈ ಸನ್ನಿಧಾನದಲ್ಲಿ ನಡೆದಿದ್ದು ಹಿರಿಯ ಕುಳಾವಿಗಳು ಈಗಲೂ ಅದನ್ನು ಸ್ಮರಿಸುತ್ತಾರೆ.

ಚಾತುರ್ಮಾಸ ಮುಗಿದು ತುಳಸಿ ಪೂಜೆಯಂದು ದೇವರು ಹೊರಗೆ ಬರುವ ಸಂಪ್ರದಾಯ ಎಲ್ಲೆಡೆಯೂ ಇದ್ದು ಇಲ್ಲಿ ನವರಾತ್ರಿ ನವಮಿ ದಿನದಂದೇ ಪ್ರಧಾನ ದೇವಿ ಕಾತ್ಯಾಯನೀ ಮೂರ್ತಿಯನ್ನು ಸಾಲಿಗ್ರಾಮ ಸಹಿತ ಹೊರಗೆ ತರುವ ಸಂಪ್ರದಾಯವಿದೆ. ಪ್ರಧಾನ ದೇವರಮೂರ್ತಿ ಅಥವಾ ಪಟ್ಟದೇವರು ಎಂದು ಕರೆಯುವ ಮೂರ್ತಿ ಯಾವಾಗಲೂ ಮೇಲ್ಭಾಗದಲ್ಲಿ ಇರಬೇಕಾಗಿದ್ದು ಇಲ್ಲಿ ಪಟ್ಟದೇವರ ಸ್ಥಾನದಲ್ಲಿ ವೆಂಕಟರಮಣ ದೇವರಿದ್ದಾನೆ. ಆದ್ದರಿಂದ ಕಾತ್ಯಾಯನೀ ಮೊದಲು ವೆಂಕಟರಮಣನ ಆರಾಧನೆ ಇಲ್ಲಿ ನಡೆಯುತ್ತಿರಲೂಬಹುದು ಎಂದು ಅಂದಾಜಿಸಲಾಗಿದೆ.

ಟಿಪ್ಪು ಕಾಲದಲ್ಲಿ ದಿವಟಿಗೆ ಸಲಾಂ ಎಂಬ ಪದ್ದತಿ ಪ್ರಾರಂಭವಾಗಿದ್ದು ಆತ 1799 ರಲ್ಲಿ ಮರಣ ಹೊಂದಿದ್ದು ಕಾತ್ಯಾಯನೀ ಮಠದಲ್ಲಿ ಈಗಲೂ ದಿವಟಿಗೆ ಸಲಾಂ ನಡೆಯುತ್ತದೆ. 1799 ರ ಮೊದಲೇ ದೇವಸ್ಥಾನ ನಿರ್ಮಾಣವಾಗಿತ್ತು ಎಂಬುವುದೇ ಇದಕ್ಕೆ ಸಾಕ್ಷಿ. ನವರಾತ್ರಿಯಲ್ಲಿ ಅಲಂಕಾರಕ್ಕೋಸ್ಕರ ಮಾಡುವ ಅವತಾರ ಎಂಬುವುದು ಜಿ ಎಸ್ ಬಿ ಸಮಾಜದ ಪೈಕಿ ಮಂಗಳೂರಿನಲ್ಲಿ ಪ್ರಾರಂಭವಾದದ್ದೇ ಮೊದಲು ಕಾತ್ಯಾಯನೀ ಮಠದಲ್ಲಿ ಎಂಬುವುದಕ್ಕೆ ಪುರಾವೆಗಳಿವೆ.

ಮಹಾನವಮಿಗೆ ಚಂಡಿಕಾ ಯಾಗ, ಪೂಜೆ ಸ್ವೀಕರಿಸಿದ ಕುಮಾರಿದ್ವಯರಿಗೆ ಗರ್ಭಗುಡಿ ಪ್ರವೇಶ, ಗಣಗಳ ಸಮ್ಮುಖ ಬಲಿ, ಗಣಗಳಿಗೆ ರಾಶಿ ರಾಶಿ ತೆಂಗಿನಕಾಯಿ ಹೊಡೆಯುವ ವಿನೂತನ ಸಂಪ್ರದಾಯ ವಾದ್ಯ ಮೂಲಕ ಬಲಿ ಮೆರವಣಿಗೆ ಇತ್ಯಾದಿ ಇಲ್ಲಿನ ವಿಶಿಷ್ಟ ಸಂಪ್ರದಾಯಗಳು. ಇಲ್ಲಿ ಬ್ರಹ್ಮರ ಮುಂತಾದವುಗಳೇ ಮೊದಲಾದ ಗಣಗಳ ಸಾನಿಧ್ಯವಿದ್ದು ರಾತ್ರಿ ಹೊತ್ತಿನಲ್ಲಿ ರಥಬೀದಿ ಸುತ್ತಮುತ್ತ ಕಾತ್ಯಾಯನೀ ಮಠದ ಗಣಗಳು ಮತ್ತು ಈ ರಸ್ತೆಯ ಇತರ ಗಣಗಳ ಸವಾರಿ ಇದ್ದು ಹಲವಾರು ಮಂದಿ ಇದರ ಅನುಭವಕ್ಕೆ ಸಾಕ್ಷಿಯಾಗಿದ್ದಾರೆ.

75-80 ವರ್ಷ ದಾಟಿದ ಈ ಪರಿಸರದ ಹಿರಿಯರು ಯಾರಾದರೂ ಇದ್ದಲ್ಲಿ ಗತವೈಭವ ಹೇಗಿತ್ತು ಅನ್ನುವುದನ್ನು ಅವರು ಸವಿವಾರವಾಗಿ ವಿವರಿಸಬಲ್ಲರು, ಅಂತಹ ಹಿರಿಯರೊಬ್ಬರು ಇಂದಿನ ಕಾತ್ಯಾಯನೀ ಮಠದ ಉತ್ಸವಾದಿಗಳನ್ನು ಗಮನಿಸಿ ನಿಮ್ಮ ಹಳೆಯ ಗತವೈಭವ ಮರುಕಳಿಸುತ್ತಿದೆ ನಿನಗೆ ಕಾತ್ಯಾಯನೀ ಒಲಿದಿದ್ದಾಳೆ ಎಂದು ಕಾತ್ಯಾಯನೀ ಮಠದ ಗೋಪಿ ಭಟ್ಟರಿಗೆ ಮನಸಾರೆ ಆಶೀರ್ವಾದ ಮಾಡಿದ್ದನ್ನು ಗೋಪಿ ಭಟ್ಟರು ಭಾವುಕರಾಗಿ ವಿವರಿಸುತ್ತಾರೆ.

ಇತಿಹಾಸದ ಬಗ್ಗೆ ಯಾರಿಗಾದರೂ ಮಾಹಿತಿ ಬೇಕಾದರೆ ಈಗಿನ ಕಾತ್ಯಾಯನೀ ಗೋಪಾಲ ಭಟ್ಟರು (ಗೊಪಿ ಭಟ್) ಅವರ ಮೊಬೈಲ್ ಸಂಖ್ಯೆ 9844573339 ಗೆ ಕರೆ ಮಾಡಿ ಅವರ ಪ್ರಶ್ನೆಗಳನ್ನು ಕೇಳಬಹುದು ಎಂದು ಹೇಳುತ್ತಾರೆ. ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ಹೇಗೆ ಕಾತ್ಯಾಯನೀ ಮಠ ಪರಂಪರೆ, ಇತಿಹಾಸವನ್ನು ಮರೆಮಾಚಲು, ಅಳಿಸಲು ಪ್ರಯತ್ನಿದರು ಈಗಲೂ ಅದು ಮುಂದುವರೆಯುತ್ತಿದೆ ಎಂದು ಬೇಸರದಿಂದ ತಿಳಿಸಿದರು. ನಮ್ಮ ಮಠದ ಇತಿಹಾಸ ಜನಮಾನಸಕ್ಕೆ ತಿಳಿಯಪಡಿಸುವುದು ತನ್ನ ಕರ್ತವ್ಯ ಮತ್ತು ತನ್ನ ಧರ್ಮ ಎಂದು ಗೋಪಿ ಭಟ್ಟರು ಹೇಳುತ್ತಾರೆ.

ಒಟ್ಟಿನಲ್ಲಿ ಮರೆಯಲ್ಪಟ್ಟ ಇತಿಹಾಸಕ್ಕೆ ಮರು ಜೀವ ಸಿಗಲಿ, ಕಾತ್ಯಾಯನೀ ಮಠದಂತೆ ಇತರ ಪುರಾತನ ದೇವಸ್ಥಾನಗಳೂ ಜೀರ್ಣೋದ್ಧಾರವಾಗಲಿ ಎಂಬ ಬಯಕೆ ನಮ್ಮದು ಎನ್ನುತ್ತಾರೆ ಗೋಪಿ ಭಟ್.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!