ಮಂಗಳೂರು: ಉಡುಪಿ ಪರ್ಯಾಯ ಪೀಠಾರೋಹಣಗೈಯಲ್ಲಿರುವ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಅವರ ಉಡುಪಿ ಪರ್ಯಾಯ ಮಹೋತ್ಸವದ ಹಿನ್ನಲೆಯಲ್ಲಿ ಹೊರೆಕಾಣಿಕೆ ಕೇಂದ್ರ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಬುಧವಾರ ಉದ್ಘಾಟನೆಗೊಂಡಿತು.
ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ಗುರುಗಳು ಪೂರ್ಣ ದೇವರ ಪೂಜೆ, ಅನುಷ್ಠಾನ ಕರ್ತವ್ಯದಲ್ಲೇ ಇರುವವರು.
ತ್ಯಾಗಿಯಾಗಿ, ಸನ್ಯಾಸಿಯಾಗಿ ಆದರ್ಶಪ್ರಾಯರಾಗಿ, ಅಪೇಕ್ಷೆ ಯಾವುದೂ ಇಲ್ಲದೆ, ಕೃಷ್ಣನ ಕುರಿತ ಅಲೋಚನೆ ಮಾತ್ರ ಮಾಡುವ ಮೂಲಕ ಆದರ್ಶಪ್ರಾಯರು. ಅವರ ಪರ್ಯಾಯ ಕಾಲದಲ್ಲಿ ಲೋಕಕ್ಕೆ ಮಂಗಳವಾಗಲಿ ಎಂದರು.
ಶ್ರೀ ಕ್ಷೇತ್ರದ ಶರವು ಶಿಲೆ ಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಪ್ರಮುಖರಾದ ಪ್ರೊ. ಎಂ.ಬಿ. ಪುರಾಣಿಕ್, ಎಸ್. ಪ್ರದೀಪ ಕುಮಾರ ಕಲ್ಕೂರ, ಹರಿಕೃಷ್ಣ ಪುನರೂರು, ಕರುಣಾಕರನ್, ನಿತ್ಯಾನಂದ ಕಾರಂತ, ಸುಧಾಕರ ರಾವ್ ಪೇಜಾವರ, ಕಾತ್ಯಾಯಿನಿ, ಮಹಾಬಲ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಪಿ.ವಿ. ರಾವ್, ಪ್ರಭಾಕರ ರಾವ್ ಪೇಜಾವರ, ಶ್ರೀಕಾಂತ್, ಜಿ.ಕೆ. ಭಟ್ ಸೇರಾಜೆ, ಜನಾರ್ದನ ಹಂದೆ, ಸನತ್ ಕುಮಾರ್ ಜೈನ್, ಗಣೇಶ್ ಭಟ್, ತಾರನಾಥ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.