ಮುಲ್ಕಿ, ಜ.31: ಮುಲ್ಕಿ ಸೀಮೆ ಅರಸರಾದ ಎಂ ದುಗ್ಗಣ್ಣ ಸಾವಂತರ ಆಶಯದಂತೆ ಅರಸು ಶಿಕ್ಷಣ ಸಮೃದ್ಧಿ ಯೋಜನೆ ಪ್ರಾರಂಭಗೊಂಡಿದ್ದು, ಇದರ ಪ್ರಥಮ ಕಾರ್ಯಕ್ರಮ ಲೋಕಾರ್ಪಣೆಗೊಂಡಿದ್ದು, ಅರಸು ಶಾಲೆಯೇ ಎಂದು ಪ್ರಸಿದ್ಧಿ ಪಡೆದಿದ್ದ ದ.ಕ.ಜಿ.ಪ ಸರ್ಕಾರಿ ಶಾಲೆ ಪಡುಪಣಂಬೂರು ಇದರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ರೂಪಾಯಿ 10,000/- ವನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಮುಲ್ಕಿ ಅರಮನೆ ವೆಲ್ಫೇರ್ ಹಾಗೂ ಚಾರಿಟೇಬಲ್ ಟ್ರಸ್ಟ್ ರಿ. ಇದರ ಟ್ರಸ್ಟಿ ಗೌತಮ್ ಎಂ. ಜೈನ್ ಇವರು ಹಸ್ತಾಂತರಿಸಿದರು. ಮುಲ್ಕಿ ಅರಮನೆಯ ಕಾಸಪ್ಪಯ್ಯರ ಮನೆ ವಕೀಲರಾದ ಚಂದ್ರಶೇಖರ್ ಜಿ., ಅರಮನೆಯ ಹಿತೈಷಿಗಳಾದ ಎಚ್. ವಸಂತ್ ಬೆರ್ನಾರ್ಡ್, ವಿನೋದ್ ಸಾಲ್ಯಾನ್ ಹಾಗೂ ಧರ್ಮಾನಂದ ಶೆಟ್ಟಿಗಾರ್ ಇದ್ದರು.
ಅರಸು ಶಿಕ್ಷಣ ಸಮೃದ್ಧಿ ಯೋಜನೆಗೆ ಚಾಲನೆ
ಅರಸು ಶಿಕ್ಷಣ ಸಮೃದ್ಧಿ ಯೋಜನೆಗೆ ಚಾಲನೆ
Date: