ಬಂಟ್ವಾಳ: ಯುವಕ ಮಂಡಲ (ರಿ.) ಇರಾ ಇದರ ವಾರ್ಷಿಕ ಮಹಾಸಭೆ ಯುವಕ ಮಂಡಲದ ವಠಾರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಹಿರಿಯ ಸದಸ್ಯ, ಯತಿರಾಜ ಶೆಟ್ಟಿ ಸಂಪಿಲ ವಹಿಸಿದ್ದರು. ಸಂಘದ ಅಧ್ಯಕ್ಷ ಪ್ರಸೀನ್ ಶೆಟ್ಟಿ ಆಚೆಬೈಲು ಇವರ ನೇತೃತ್ವದಲ್ಲಿ ಸಂಘದ ವಾರ್ಷಿಕ ಆಯವ್ಯಯಗಳನ್ನು ಕಾರ್ಯದರ್ಶಿ ನಿಖಿಲ್ ಕೊಟ್ಟಾರಿ ಮಂಡಿಸಿದರು.
ಯುವಕ ಮಂಡಲದ 2022-23 ರ ಸಾಲಿನ ನೂತನ ಪಧಾದಿಕಾರಿಗಳನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ಅಶ್ವಿತ್ ಕೊಟ್ಟಾರಿ ಇರಾ, ಉಪಾಧ್ಯಕ್ಷರಾಗಿ ಪ್ರಸನ್ನ ರೈ ಎಲದರಬಾವ, ಕಾರ್ಯದರ್ಶಿಯಾಗಿ ಭರತ್ ರಾಜ್ ಮಾಣೈ, ಜತೆ ಕಾರ್ಯದರ್ಶಿಯಾಗಿ ಶಾಶ್ವತ್ ಬಾವಬೀಡು, ಕೋಶಾಧಿಕಾರಿಯಾಗಿ ಲಿಖಿತ್ ಕೊಟ್ಟಾರಿ ತಾಳಿತ್ತಬೆಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನ್ವಿತ್ ವೈ ಶೆಟ್ಟಿ ಮತ್ತು ಸುಹಾಗ್ ಕೊಟ್ಟಾರಿ ಸಂಪಿಲ, ಕ್ರೀಡಾ ಕಾರ್ಯದರ್ಶಿಯಾಗಿ ಅದ್ರಾಮ ಡಿ ಆಯ್ಕೆಯಾದರು.
ಸಂಘದ ಹಿರಿಯ ಸದಸ್ಯರಾದ ಗಣೇಶ್ ಕೊಟ್ಟಾರಿ ಸಂಪಿಲ, ಯತಿರಾಜ್ ಕೊಟ್ಟಾರಿ ಸಂಪಿಲ, ಪದ್ಮನಾಭ ಭಂಡಾರಿ ಪಾತ್ರಾಡಿ, ಸ್ಟೀವನ್ ಡಿಸಿಲ್ವ, ಸುಂದರ್ ಪೂಜಾರಿ, ಐತಪ್ಪ ಪೂಜಾರಿ ಹಾಗು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.