Sunday, February 23, 2025
Sunday, February 23, 2025

ಕಟೀಲು: ವಿದ್ಯಾರ್ಥಿ ಸಂಘದ ಉದ್ಘಾಟನೆ

ಕಟೀಲು: ವಿದ್ಯಾರ್ಥಿ ಸಂಘದ ಉದ್ಘಾಟನೆ

Date:

ಕಟೀಲು, ಸೆ.19: ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜು ಕಟೀಲು 2024 -2025 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯು ಬುಧವಾರದಂದು ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿನಿ ಕೃಪಾ ಮತ್ತು ಬಳಗದಿಂದ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಪ್ರಾರ್ಥನೆಯನ್ನು ತ್ರಿಷಾ ಮತ್ತು ಬಳಗ ನಡೆಸಿಕೊಟ್ಟರು. ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುತ್ತಾ ವಿದ್ಯಾರ್ಥಿಗಳ ಬದುಕಿನ ಮತ್ತು ಜವಾಬ್ದಾರಿ ಬಗ್ಗೆ ತಿಳಿಸಿ ದೇಶಭಕ್ತಿಯ ಮೂಲಕ ಸದೃಢ ದೇಶ ನಿರ್ಮಾಣಕ್ಕಾಗಿ ದುಡಿಯಬೇಕು ಆ ಮೂಲಕ ದೇವರ ಆಶೀರ್ವಾದ ನಮಗೆ ದೊರೆಯುವುದು ಎಂದರು.

ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗಿರೀಶ್ ಎಂ ಶೆಟ್ಟಿ ಹಾಗೂ ಶಕುಂತಲ ನಿರೇಂದ್ರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ, ತರಗತಿ ನಾಯಕರಿಗೆ ಹಾಗೂ ವಿವಿಧ ಸಂಘದ ವಿದ್ಯಾರ್ಥಿ ಕಾರ್ಯದರ್ಶಿಗಳಿಗೆ ವಿದ್ಯಾರ್ಥಿ ಕ್ಷೇಮಾಪಾಲನ ಅಧಿಕಾರಿ ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಮ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಂತರ ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಡೆವೆಲಪರ್ಸ್ ಕಟೀಲು ಇದರ ಮಾಲಿಕರಾದ ಗಿರೀಶ್ ಎಮ್ ಶೆಟ್ಟಿ ಹಾಗೂ ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿನಿ ಭಾರತ್ ಬ್ಯಾಂಕ್ (ಮುಂಬಯಿ) ಮುಲ್ಕಿ ಶಾಖೆಯ ಮ್ಯಾನೇಜರ್ ಶಕುಂತಲ ನಿರೇಂದ್ರ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಹಾಗೂ ತರಗತಿ ನಾಯಕರಿಗೆ ಬ್ಯಾಡ್ಜ್ ನೀಡಿ ಗೌರವಿಸಿದರು.

ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತಾನಾಡಿ ಗಿರೀಶ್ ಎಂ ಶೆಟ್ಟಿ, ವಿದ್ಯಾರ್ಥಿಗಳು ಹೇಗಿರಬೇಕು ತಮ್ಮನ್ನು ತಾವು ಪ್ರೀತಿಸುತ್ತಾ ಒಳ್ಳೆಯ ಅಭ್ಯಾಸವನ್ನು ಅಳವಡಿಸಿಕೊಂಡು ಚಿಕ್ಕಪುಟ್ಟ ಕೆಲಸವನ್ನು ಉತ್ತಮವಾಗಿ ನಡೆಸುತ್ತಾ ಬದುಕಿನಲ್ಲಿ ದೊಡ್ಡದಾದ ಸಾಧನೆಗಳನ್ನು ಮಾಡಬೇಕು ಅದಕ್ಕಾಗಿ ನಮ್ಮ ಜೀವನ ಉತ್ತಮವಾಗಿ ನಡೆಸಬೇಕು ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾನಾಡಿದ ಶಕುಂತಲ ನಿರೇಂದ್ರ ಅವರು ತಾನು ಕಲಿತ ವಿದ್ಯಾ ಸಂಸ್ಥೆಯ ಮೂರು ವರುಷಗಳ ನೆನಪುಗಳನ್ನು ಮೆಲುಕು ಹಾಕುತ್ತಾ ತನ್ನ ಕ್ರೀಡಾ ಸಾಧನೆಗೆ ಪ್ರೋತ್ಸಾಹ ಸಹಕಾರವನ್ನು ನೀಡಿದ ಎಲ್ಲ ಗುರುಗಳನ್ನು ನೆನೆಪಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಸಮಯದಲ್ಲಿ ಕ್ರೀಡೆ ಮತ್ತು ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಆ ಮೂಲಕ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಡಾ। ವಿಜಯ್ ವಿ ಅವರು ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿಯ ಜೊತೆಗೆ ಸಂಸ್ಥೆಯ ಕ್ರೀಯಾಶೀಲ ಚಟುವಟಿಕೆಗಳ ಬಗ್ಗೆ ತಿಳಿಸಿ ವಿದ್ಯಾ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ದುಡಿಯೋಣ ಎಂದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪಟ್ಟಿಯನ್ನು ಉಪನ್ಯಾಸಕಿ ಶಿಫಾಲಿ ವಾಚಿಸಿದರು. ಅತಿಥಿ ಗಣ್ಯರ ಕಿರು ಪರಿಚಯವನ್ನು ತೃತೀಯ ಬಿ.ಕಾಂ ವಿದ್ಯಾರ್ಥಿಗಳಾದ ಪೂಜಾ ಹಾಗೂ ಯೋಗಿನಿ ಸುಷ್ಮಾ ಶೆಟ್ಟಿ ವಾಚಿಸಿದರು. ವಾಣಿಜ್ಯ ಉಪನ್ಯಾಸಕಿ ಪೂಜಾ ಕಾಂಚನ್ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಿಯಾಂಕ ವಂದಿಸಿದರು. ಪ್ರಾಂಜಲಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಾಂಕ್, ಉಪಾಧ್ಯಕ್ಷ ಆದಿತ್ ಆರ್ ಶೆಟ್ಟಿ , ಕಾರ್ಯದರ್ಶಿ ಮನೀಶ್, ಜೊತೆ ಕಾರ್ಯದರ್ಶಿ ತೃಶಾ ಶೆಟ್ಟಿ ಹಾಗೂ ಶಿಕ್ಷಕ -ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶ್ರೀವತ್ಸ, ಸುಹಾಸ್ ರಾವ್. ಹರ್ಷಿತಾ, ಪ್ರಥ್ವೀ ನಡೆಸಿಕೊಟ್ಟರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!