ಮಂಗಳೂರು, ಸೆ.18: ಸಿಒಡಿಪಿಯ ಮದರ್ ಥೆರೆಸಾ ಸಭಾಂಗಣದಲ್ಲಿ ಶ್ರೀ ಮೈಕಲ್ ಡಿ ಸೋಜ ಮತ್ತು ಕುಟುಂಬದ ಎಜುಕೇರ್ ಎಂಡೋಮೆಂಟ್ (ರಿವಾಲ್ವಿಂಗ್) ನಿಧಿಯನ್ನು ಉದ್ಘಾಟಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಡಾ. ಪೀಟರ್ ಪೌಲ್ ಸಲ್ಡಾನ್ಹ ಉದ್ಘಾಟಿಸಿದರು. ಶಿಕ್ಷಣ ಸಮಿತಿ ಸಲಹೆಗಾರ ರೆ.ಫಾ. ವಲೇರಿಯನ್ ಡಿ ಸೋಜ, ಮೈಕಲ್ ಡಿ ಸೋಜ ಅವರ ಧರ್ಮಪತ್ನಿ ಫ್ಲಾವಿಯ ಡಿ ಸೋಜ, ಮೈಕಲ್ ಡಿ ಸೋಜರವರ ಪುತ್ರಿ ನಿಶಾ ಡಿ ಸೋಜ. ಸಿಒಡಿಪಿ ನಿರ್ದೇಶಕರಾದ ರೆ.ಫಾ. ವಿನ್ಸೆಂಟ್ ಡಿ ಸೋಜ ಶಿಕ್ಷಣ ನಿಧಿಯ ಪ್ರತಿಷ್ಠಾಪಕ ಧಾನಿಗಳಾದ ಮೈಕಲ್ ಫ್ಲಾವಿಯ ಡಿಸೋಜ ಮತ್ತು ನಿಶಾ ಡಿಸೋಜ ರವರ ಪರಿಚಯ ನೀಡಿದರು.
ಸಿಒಡಿಪಿ ಸಂಸ್ಥೆಗೆ ಸಹಕಾರ ನೀಡುವ ರೆ.ಫಾ ವಲೇರಿಯನ್ ಡಿ ಸೋಜ, ಸ್ಟೀಫನ್ ಪಿಂಟೊ, ಒಸ್ವಲ್ಡ್ ರೊಡ್ರಿಗಸ್, ಹೆನ್ರಿ ಡಿ ಸೋಜ ಮತ್ತು ಲೈನಲ್ ಅರಾನ್ಹ ರವರನ್ನು ಬಿಷಪ್ ರವರು ಗೌರವಿಸಿದರು ರೆ.ಫಾ ಲೊರೆನ್ಸ್ ಕುಟಿನ್ಹಾರವರು ಸಹಕರಿಸಿದರು. ಈ ನಿಧಿಯಿಂದ ಮಂಗಳೂರು ಧರ್ಮಪ್ರಾಂತ್ಯದ 84 ವಿದ್ಯಾರ್ಥಿಗಳಿಗೆ ರೂ. 74,42,000/- ಬಡ್ಡಿ ರಹಿತ ಸಾಲವನ್ನು ಬ್ಯಾಂಕಿನ ಮುಖಾಂತರ ವಿತರಿಸಲಾಗುವುದು. ರಿಚರ್ಡ್ ಅಲ್ವಾರಿಸ್ ಕಾರ್ಯಕ್ರಮ ನಿರೂಪಿಸಿದರು ರೀನಾ ವಂದಿಸಿದರು.