ಮಂಗಳೂರು, ಜು.31: ನಗರದಲ್ಲಿ ಸುರಿದ ಭಾರಿ ಮಳೆಗೆ ತಡರಾತ್ರಿ ಇತಿಹಾಸ ಪ್ರಸಿದ್ಧ ಗುಜ್ಜರಕೆರೆ ಬಳಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿ ಪರಿಣಾಮ ಗುಜ್ಜರ ಕೆರೆಯ ಸುತ್ತಲೂ ಮಕ್ಕಳು ಹಾಗೂ ಹಿರಿಯರ ಸುರಕ್ಷತೆಯ ದೃಷ್ಟಿಯಿಂದ ಹಾಕಲಾಗಿದ್ದ ಸ್ಟೀಲ್ ರೇಲಿಂಗ್ ಮುರಿದಿದೆ. ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ಭೇಟಿ ನೀಡಿ ಅಗತ್ಯ ಕಾರ್ಯಾಚರಣೆಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು. ಸಂಜೆಯ ವೇಳೆ ಸದಾ ಇಲ್ಲಿ ವಾಕಿಂಗ್ ಮಾಡುವರ ಸಂಖ್ಯೆ ಹೆಚ್ಚಿದ್ದು ಮಳೆಯ ಕಾರಣದಿಂದಾಗಿ ಜನರು ಇತ್ತ ಕಡೆ ಸುಳಿದಿರಲಿಲ್ಲ. ಹೀಗಾಗಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಗುಜ್ಜರಕೆರೆ: ಬೃಹತ್ ಗಾತ್ರದ ಮರ ಉರುಳಿ ಸ್ಟೀಲ್ ರೇಲಿಂಗ್ ಗೆ ಹಾನಿ; ತಪ್ಪಿದ ದುರಂತ

ಗುಜ್ಜರಕೆರೆ: ಬೃಹತ್ ಗಾತ್ರದ ಮರ ಉರುಳಿ ಸ್ಟೀಲ್ ರೇಲಿಂಗ್ ಗೆ ಹಾನಿ; ತಪ್ಪಿದ ದುರಂತ
Date: