ಮಂಗಳೂರು, ಜೂ.16: ಮಂಗಳೂರು ನಗರದ ಉರ್ವಾಸ್ಟೋರ್ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪತ್ರಕರ್ತ ತಾರನಾಥ್ ಗಟ್ಟಿ ಕಾಪಿಕಾಡ್ ರವರನ್ನು ಕಾಂಗ್ರೆಸ್ ನಾಯಕಿ ಮಂಜುಳಾ ನಾಯಕ್ ಭೇಟಿ ಮಾಡಿ, ಅಭಿನಂದಿಸಿ ಶುಭ ಹಾರೈಸಿದರು. ಬಳಿಕ ಮಾತನಾಡಿದ ಅವರು, ತಾರನಾಥ್ ಗಟ್ಟಿಯವರ ಅವಧಿಯಲ್ಲಿ ನಮ್ಮ ನೆಲದ ಭಾಷೆ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಸೇವೆಯನ್ನು ಎಲ್ಲರೂ ಜೊತೆಯಾಗಿ ಪ್ರಾಮಾಣಿಕವಾಗಿ ನಡೆಸಿಕೊಂಡು ತಮ್ಮ ಅವಧಿ ಶುದ್ಧ ಮತ್ತು ಪಾರದರ್ಶಕವಾಗಿರಲಿ ಎಂದು ಹಾರೈಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರುಗಳಾದ ಪೃಥ್ವಿರಾಜ್, ಕುಂಬ್ರ ದುರ್ಗಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆರ್. ಶೆಟ್ಟಿ, ಶೈಲೇಶ್, ಕಿಶೋರ್, ಬೂಬ ಪೂಜಾರಿ, ರೋಹಿತಾಶ್ವ ಯು. ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್ ಶೆಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಮರ್ಥ್ ಭಟ್, ಉಮ್ಮರ್ ಸಾಲೆತ್ತೂರ್ ಮತ್ತಿತರು ಉಪಸ್ಥಿತರಿದ್ದರು.