ಮಂಗಳೂರು, ಜೂ.9: ಮಂಗಳೂರು ವಕೀಲರ ಸಂಘದ 2024-26 ರ ಪದಾಧಿಕಾರಿಗಳ ಆಯ್ಕೆಯು ಮಂಗಳೂರು ವಕೀಲರ ಸಂಘದ ಕಛೇರಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಎಚ್. ವಿ ರಾಘವೇಂದ್ರ, ಉಪಾಧ್ಯಕ್ಷರಾಗಿ ಸುಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ್ ಎಚ್., ಜತೆ ಕಾರ್ಯದರ್ಶಿಯಾಗಿ ಜ್ಯೋತಿ ಮತ್ತು ಖಜಾಂಚಿಯಾಗಿ ಗಿರೀಶ್ ಶೆಟ್ಟಿ ಇವರು ಆಯ್ಕೆಯಾಗಿರುತ್ತಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಶಾ ದೀಪ ಪೈ ಎಚ್, ಆಶಾ ನಾಯಕ್, ದೇವದಾಸ್ ರಾವ್, ಪುರುಶೋತ್ತಮ ಭಟ್ ಎಮ್., ಚಂದ್ರಹಾಸ ಕೊಟ್ಟಾರಿ, ಕುಶಾಲಪ್ಪ ಕೆ., ಪ್ರವೀಣ್ ಕುಮಾರ್ ಅಧ್ಯಪಾಡಿ, ಸುಮನಾ ಶರಣ್, ಆರತಿ, ಹರೀಶ್ ಕೆ., ರವಿಕುಮಾರ್ ವಿ., ರವಿರಾಜ್, ಗಿರೀಶ, ಕೃಷ್ಣಪ್ರಸಾದ್ ಕೆ.ವಿ., ಮಹಮ್ಮದ್ ಅಸ್ಗರ್ ಹಾಗೂ ಅಕ್ಷತಾ ಇವರು ಆಯ್ಕೆಯಾಗಿರುತ್ತಾರೆ. ಚುನಾವಣೆಯನ್ನು ಮಂಗಳೂರು ವಕೀಲರ ಸಂಘದ ಚುನಾವಣಾಧಿಕಾರಿ ಹಾಗೂ ಹಿರಿಯ ವಕೀಲರಾದ ಡೆರಿಲ್ ಅಂದ್ರಾದೆ ನಡೆಸಿದರು.
ಮಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಚ್ ವಿ ರಾಘವೇಂದ್ರ ಆಯ್ಕೆ
ಮಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಚ್ ವಿ ರಾಘವೇಂದ್ರ ಆಯ್ಕೆ
Date: