ಮಂಗಳೂರು, ಮಾ.24: ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ಇದರ ವತಿಯಿಂದ 56 ಅಶಕ್ತ ಕುಟುಂಬಗಳಿಗೆ ಒಟ್ಟು ರೂ. 12,20,000 ಮೊತ್ತದ ಧನಸಹಾಯ ವಿತರಣೆ ಕಾರ್ಯಕ್ರಮ ಸಹೋದಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಪ್ರಮುಖರಾದ ಅರ್ಜುನ್ ಭಂಡಾರ್ಕರ್ ಗಣ್ಯರ ಸಮ್ಮುಖದಲ್ಲಿ ಧನಸಹಾಯ ವಿತರಿಸಿದರು.
ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮೂಡುಬಿದ್ರೆ ಸಂಸ್ಥಾಪಕರಾದ ಪ್ರಕಾಶ್ ಜೆ. ಶೆಟ್ಟಿಗಾರ್, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ ರೋಯ್ ಕ್ಯಾಸ್ತಲಿನೊ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಸಂಗೀತಾ ಆರ್. ನಾಯಕ್, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಹೋಮ್ ಡಾಕ್ಟರ್ ಫೌಂಡೇಶನ್ (ರಿ.) ಉಡುಪಿಯ ಅಧ್ಯಕ್ಷರಾದ ಡಾ. ಶಶಿಕಿರನ್ ಶೆಟ್ಟಿ, ಸೇವಾ ಚಾರಿಟೇಬಲ್ ಟ್ರಸ್ಟ್ (ರಿ.) ಕಾಟಿಪಳ್ಳದ ಅಧ್ಯಕ್ಷರಾದ ಎ.ಪಿ. ಮೋಹನ್ ಗಣೇಶಪುರ, ಅಪ್ಪ ಅಮ್ಮ ಅನಾಥಾಶ್ರಮ ಬ್ರಹ್ಮಾವರದ ಮುಖ್ಯಸ್ಥರಾದ ಪ್ರಶಾಂತ್ ಪೂಜಾರಿ ಕೂರಾಡಿ, ಬಡಜನ ಸೇವಾ ಫ್ರೆಂಡ್ಸ್ ಕುಪ್ಪೆಪದವು ಸ್ಥಾಪಕರಾದ ಮುನೀರ್ ನಡುಪಳ್ಳ, ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ (ರಿ.) ಮಡವುದ ಅಧ್ಯಕ್ಷರಾದ ಸಚಿನ್ ಸುವರ್ಣ, ಹಾರ್ದಿಕ್ ಫ್ರೆಂಡ್ಸ್ ಪಚ್ಚನಾಡಿ ಇದರ ಧನುಷ್ ರಾಜ್ ಪಚ್ಚನಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.