Sunday, January 19, 2025
Sunday, January 19, 2025

ಕೆನರಾ ಹೈಸ್ಕೂಲ್ ಅಸೋಸಿಯೇಷನ್- ಶಿಕ್ಷಕರ ತರಬೇತಿ ಶಿಬಿರ

ಕೆನರಾ ಹೈಸ್ಕೂಲ್ ಅಸೋಸಿಯೇಷನ್- ಶಿಕ್ಷಕರ ತರಬೇತಿ ಶಿಬಿರ

Date:

ಮಂಗಳೂರು: ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮಂಗಳೂರು ಇದರ ವತಿಯಿಂದ ಶಿಕ್ಷಕರ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಚಕ್ರವರ್ತಿ ಸೂಲಿಬೆಲೆ ಇವರು ಸುಮಾರು ಮುನ್ನೂರಕ್ಕೂ ಹೆಚ್ಚು ಶಿಕ್ಷಕರಿಗೆ ಕಾರ್ಯಗಾರದಲ್ಲಿ ಮಾರ್ಗದರ್ಶನ ನೀಡಿದರು.

ವ್ಯಕ್ತಿ ನಿರ್ಮಾಣದಲ್ಲಿ ಶಿಕ್ಷಕನೊಬ್ಬನ ಆದ್ಯ ಕರ್ತವ್ಯವನ್ನು ವಿವರಿಸುತ್ತಾ, ಶಿಕ್ಷಣದ ಪ್ರಕ್ರಿಯೆಯು ವಿದ್ಯಾರ್ಥಿಗಳ ಯೋಚನಾ ಸಾಮರ್ಥ್ಯವನ್ನು ದಹಿಸುವುದರೊಂದಿಗೆ ಸ್ಫೂರ್ತಿ ನೀಡುವಂತಹ ಪ್ರೇರಣಾ ಪ್ರಕ್ರಿಯೆಯು ಆತನಿಂದ ಆಗಬೇಕಿದೆ ಎಂದು ಮನೋಜ್ಞವಾಗಿ ವಿವರಿಸಿದರು.

ಮಗುವಿನ ಆಲೋಚನೆಗೆ ಪ್ರೇರಣೆ ನೀಡಬೇಕು. ಮಗುವಿನ ನಂಬಿಕೆಗೆ ನ್ಯಾಯ ಒದಗಿಸುವ ಕೆಲಸ ಶಿಕ್ಷಕರಿಂದಾಗಬೇಕು. ಶಿಕ್ಷಕರ ಜವಾಬ್ದಾರಿಯನ್ನು ತಿಳಿಸುತ್ತಾ, ವೈದ್ಯನೊಬ್ಬ ಒಂದು ಕ್ಷಣ ಮೈ ಮರೆತರೆ ಒಂದು ಜೀವ ಹಾಳಾಗುವುದು. ಆದರೆ ಶಿಕ್ಷಕನೊಬ್ಬ ಆ ಒಂದು ಕ್ಷಣ ಮೈ ಮರೆತರೆ ಒಂದು ಪೀಳಿಗೆಯೇ ಹಾಳಾಗುವುದು ಎಂದು ತರ್ಕಬದ್ಧವಾಗಿ ನುಡಿದರು.

ಶಿಕ್ಷಕರು ಮಕ್ಕಳನ್ನು ತಾಯಿಯಂತೆ ಪ್ರೀತಿಸಲು ಸಾಧ್ಯವಾಗಬೇಕು. ಮಾತೃತ್ವ ಭಾವನೆಯಿಂದ ಮಾತ್ರ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುವುದು ಎಂದು ಈ ಸಂದರ್ಭದಲ್ಲಿ ನುಡಿದರು. ಉತ್ತಮ ಶಿಕ್ಷಕನಿಗೆ ಇರಬೇಕಾದ ಗುಣಲಕ್ಷಣಗಳ ಬಗ್ಗೆ ತಿಳಿಸುತ್ತಾ, ಶಾಸ್ತ್ರ ತಿಳಿಸುವಂತೆ ಪುಟ್ಟ ಮಗುವೊಂದು ನಡೆಯುವಾಗ ತಾಯಿ ಮಗುವನ್ನು ಯಾವ ರೀತಿ ಕೈಹಿಡಿದು ನಡೆಸುವಳೋ ಅದೇ ರೀತಿ ಮಗುವಿನ ಕೈ ಹಿಡಿದು ನಡೆಸುವಷ್ಟು ಆಳಕ್ಕೆ ಇಳಿಯಬೇಕು.

ಮಗುವನ್ನು ಮುನ್ನಡೆಸುವಲ್ಲಿ ಆಕೆ ಎಷ್ಟು ಎತ್ತರವಿರಬೇಕು ಮತ್ತು ಎಷ್ಟು ವೇಗವನ್ನು ಬಳಸಿಕೊಳ್ಳಬೇಕು ಎಂಬುವುದರ ಅರಿವು ಮೂಡಿದಾಗ ಮಾತ್ರ ಆ ಮಗುವನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಬಲ್ಲಳು ಎಂದು ತಿಳಿಸಿದರು. ಕೊನೆಯಲ್ಲಿ ಶಿಕ್ಷಕರೊಡನೆ ಮುಕ್ತ ಸಂವಾದ ನಡೆಸಿ ಕಲಿಕೆ ಮತ್ತು ಬೋಧನೆಯ ಪ್ರಕ್ರಿಯೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳ ಬಗ್ಗೆ ಅವಲೋಕನ ನಡೆಸಲಾಯಿತು.

ಶಿಕ್ಷಕನೊಬ್ಬನ ಡೈರಿ ಮುಂದೊಮ್ಮೆ ಡೈಜೆಸ್ಟ್ ಆಗಿ ಬಳಸುವಂತಿರಬೇಕು ಎಂದು ನುಡಿಯುತ್ತಾ ಶಿಕ್ಷಕರು ನೀಡುವ ಶಿಕ್ಷಣದಿಂದಾಗಿ ಅವರನ್ನು ಬೆಳಕು ನೀಡುವ ಗುರುವಾಗಿ ಲೋಕವೆಲ್ಲ ಗುರುತಿಸುವಂತಿರಬೇಕು ಎಂದು ನುಡಿದರು.
ಈ ತರಬೇತಿ ಕಾರ್ಯಗಾರದಲ್ಲಿ ವಿಶೇಷ ಅತಿಥಿಗಳಾಗಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಆಡಳಿತ ಮಂಡಳಿಯ ಸದಸ್ಯರಾದ ನರೇಶ್ ಶೆಣೈ, ಕೆನರಾ ವಿದ್ಯಾಸಂಸ್ಥೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕೆನರಾ ಹೈಸ್ಕೂಲ್ ಸಿಬಿಎಸ್ ಇ ಇಲ್ಲಿನ ಪ್ರಾಂಶುಪಾಲರಾದ ಅಕ್ಷತಾ ಆರ್ ಶೆಣೈ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!