ವಿದ್ಯಾಗಿರಿ, ಡಿ.22: ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಲಲಿತಕಲಾ ಸ್ಪರ್ಧೆಗಳಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು, ಸಮಗ್ರ ಪ್ರಶಸ್ತಿ ಪಡೆದಿಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಮೆಲ್ರೋಯ್ ಪೋಸ್ಟರ್ ಮೇಕಿಂಗ್‌ನಲ್ಲಿ ಪ್ರಥಮ ಸ್ಥಾನ, ಮಾಡೆಲಿಂಗ್ ನಲ್ಲಿ ಶ್ರೀಧರ್ ಬಡಿಗೇರ್ ಪ್ರಥಮ ಸ್ಥಾನ, ಕಾರ್ಟೂನಿಂಗ್‌ನಲ್ಲಿ ನಂದನ್ ದ್ವಿತೀಯ ಸ್ಥಾನ ಮತ್ತು ಇನ್ಸ್ಟಾಲೇಶನ್‌ನಲ್ಲಿ ಅಕ್ಷಿತ, ಮಣಿಕಂಠ, ಮಹೇಶ್, ರಿಫಾಯಿ ತಂಡ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಈ ಮೂಲಕ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ‘ಸಮಗ್ರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆಳ್ವಾಸ್ ಬಿವಿಎ ವಿಭಾಗದ ಉಪನ್ಯಾಸಕ ಪರಮೇಶ್ವರ್ ಇದ್ದರು.
ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
ಲಲಿತಕಲಾ ಸ್ಪರ್ಧೆ: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

ಲಲಿತಕಲಾ ಸ್ಪರ್ಧೆ: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ
Date: