ಮಂಗಳೂರು, ಡಿ.1: ನಗರದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನ್ಯಾಕ್ ಪರಿವೀಕ್ಷಣಾ ತಂಡದ ಭೇಟಿಯು ನವೆಂಬರ್ 28 ಹಾಗೂ 29 ರಂದು ಜರುಗಿತು. ನ್ಯಾಕ್ ಪರಿವೀಕ್ಷಣಾ ತಂಡದಲ್ಲಿ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ, ವಾರಣಾಸಿಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಕೃಪಾ ಶಂಕರ್, ಗುರುನಾನಕ್ ದೇವ್ ಮಹಾವಿದ್ಯಾಲಯ ಪಂಜಾಬ್ ನ ಸಮಾಜಶಾಸ್ತ್ರ ವಿಭಾಗದ ನಿಕಟಪೂರ್ವ ಮುಖ್ಯಸ್ಥರಾದ ಡಾ. ಪರಮ್ಜಿತ್ ಸಿಂಗ್ ಜಡ್ಜ್ ಹಾಗೂ ಸತಾಯೆ ಕಾಲೇಜು ಮಹಾರಾಷ್ಟ್ರದ ನಿಕಟಪೂರ್ವ ಪ್ರಾಂಶುಪಾಲೆ ಕವಿತಾ ರೇಗ್ ಉಪಸ್ಥಿತರಿದ್ದರು.
ಎರಡು ದಿನಗಳ ಸುದೀರ್ಘ ಪರಿವೀಕ್ಷಣೆಯ ಬಳಿಕ ಮಾತನಾಡಿದ ಡಾ. ಕೃಪಾ ಶಂಕರ್, ಮುಂಬರುವ ದಿನಗಳಲ್ಲಿ ಸಂಸ್ಥೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ಲಾಘಿಸಿದರು. ಬಳಿಕ ವೇದಿಕೆಯಲ್ಲಿ ಉಪಸ್ಥಿತರಿದ್ದ ನ್ಯಾಕ್ ಪರಿವೀಕ್ಷಣಾ ತಂಡದ ಸದಸ್ಯರೊಂದಿಗೆ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಮಾರ್ ಕೆ.ಸಿ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಚಾಲಕರಾದ ಪ್ರೊ.ಸಯ್ಯದ್ ಖಾದರ್ ಅವರಿಗೆ ನ್ಯಾಕ್ ವರದಿಯನ್ನು ಹಸ್ತಾಂತರಿಸಿದರು.
ಡಬ್ಲ್ಯೂ.ಎನ್.ಇ.ಎಸ್ ನ ಅಧ್ಯಕ್ಷರಾದ ಮನೇಲ್ ಅಣ್ಣಪ್ಪ ನಾಯಕ್, ಉಪಾಧ್ಯಕ್ಷೆ ಡಾ. ಮಂಜುಳಾ ಕೆ.ಟಿ, ನಿಕಟಪೂರ್ವ ಅಧ್ಯಕ್ಷರಾದ ಕುಡ್ಪಿ ಜಗದೀಶ್ ಶೆಣೈ, ಸಂಸ್ಥೆಯ ಆಡಳಿತಾಧಿಕಾರಿಯಾದ ಪ್ರೊ.ರಾಜಶೇಖರ್ ಹೆಬ್ಬಾರ್, ಸಂಧ್ಯಾ ಕಾಲೇಜಿನ ಸಂಚಾಲಕರಾದ ಸತೀಶ್ ಭಟ್, ಶ್ಯಾಮ್ ಸುಂದರ್ ಕಾಮತ್ ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕಿ ಮೀರಾ ಎಡ್ನಾ ಕೊಯಲ್ಲೊ ಕಾರ್ಯಕ್ರಮ ನಿರೂಪಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾಗದ ಪ್ರೊ.ಸಯ್ಯದ್ ಖಾದರ್ ವಂದಿಸಿದರು.