ಇರಾ, ಅ.10: 1970 ಯುವಕ ಮಂಡಲಗಳ ಪರ್ವಕಾಲ, ಅಂದು ಸ್ಥಾಪನೆಯಾದ ಯುವಕ ಮಂಡಲಗಳು ಇಂದಿಗೂ ಕಾರ್ಯನಿರ್ವಹಿಸುವುದು ಬಹಳ ಶ್ಲಾಘನೀಯ ಅದರಲ್ಲೂ ಇರಾ ಯುವಕ ಮಂಡಲದ ಸಾಧನೆ ಅಭೂತಪೂರ್ವ. ಇಂತಹ ಕಾರ್ಯಕ್ರಮ ಇನ್ನೂ ಹೆಚ್ಚಾಗಿ ನಡೆಯಲಿ ಎಂದು ಖ್ಯಾತ ವಕೀಲರಾದ ಚಿದಾನಂದ ರಾವ್ ಪತ್ತುಮುಡಿ ಹೇಳಿದರು. ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲ(ರಿ.) ಇರಾ ಸುವರ್ಣ ಸಂಭ್ರಮದ ಪ್ರಯುಕ್ತ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂದಿರದ ಇರಾ ಗೋಪಾಲಕೃಷ್ಣ ಭಾಗವತ ವೇದಿಕೆಯಲ್ಲಿ ನಡೆದ ಯಕ್ಷ ಪ್ರಣವ 2023 ಅಂತರ್ ಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಪ್ರಗತಿಪರ ಕೃಷಿಕರಾದ ಜಯರಾಮ್ ರಾವ್ ಅಲ್ಕೀರು, ಮಡ್ವಬೀಡು ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ಯುವಕ ಮಂಡಲ( ರಿ.) ಇರಾ ಇದರ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಪಿ.ಎಂ. ಕೊಡಂಗೆ, ಪ್ರಧಾನ ಸಂಚಾಲಕರಾದ ಜಗದೀಶ್ ಶೆಟ್ಟಿ ಇರಾಗುತ್ತು, ಅಧ್ಯಕ್ಷರಾದ ಜಯರಾಮ್ ಪೂಜಾರಿ ಸೂತ್ರಬೈಲು, ಕಾರ್ಯದರ್ಶಿಗಳಾದ ಸುರೇಶ್ ರೈ ಪರ್ಲಡ್ಕ, ಯುವಕ ಮಂಡಲ (ರಿ.) ಇರಾ ಇದರ ಅಧ್ಯಕ್ಷರಾದ ಗಣೇಶ್ ಕೊಟ್ಟಾರಿ ಸಂಪಿಲ, ಕಾರ್ಯದರ್ಶಿಗಳಾದ ಜಯರಾಜ್ ಶೆಟ್ಟಿ ಕುಂಡಾವು, ಕೋಶಾಧಿಕಾರಿಗಳಾದ ಶೈಲೇಶ್ ರೈ ಉಪಸ್ಥಿತರಿದ್ದರು.
ಸಂಘದ ಹಿರಿಯ ಸದಸ್ಯರಾದ ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ನಿತೇಶ್ ಶೆಟ್ಟಿ ಸಂಪಿಲ ವಂದಿಸಿದರು. ನಂತರ ನಡೆದ ವಿವಿಧ ಕಾಲೇಜುಗಳ ನಡುವೆ ಯಕ್ಷಗಾನ ಸ್ಪರ್ಧೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿತು. ನಿಟ್ಟೆಯ ಡಾ. ಎನ್.ಎಸ್.ಎ.ಎಂ ಕಾಲೇಜು ದ್ವಿತೀಯ, ಉಜಿರೆಯ ಎಸ.ಡಿ.ಎಂ ಕಾಲೇಜು ತೃತೀಯ ಸ್ಥಾನವನ್ನು ಗಳಿಸಿತು.