Sunday, January 19, 2025
Sunday, January 19, 2025

ಏಕರೂಪ ನಾಗರಿಕ ಸಂಹಿತೆ ನ್ಯಾಯದಾನ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ: ಅರುಣ್ ಶ್ಯಾಮ್

ಏಕರೂಪ ನಾಗರಿಕ ಸಂಹಿತೆ ನ್ಯಾಯದಾನ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ: ಅರುಣ್ ಶ್ಯಾಮ್

Date:

ಮಂಗಳೂರು, ಜು. 1: ಸಾಮಾಜಿಕ ನ್ಯಾಯ, ಲಿಂಗ ತಾರತಮ್ಯ, ನೈಜ ಜಾತ್ಯಾತೀತತೆ, ಸಹಬಾಳ್ವೆ, ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿ ವಿಚಾರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದ ಪರಿಣಾಮಕಾರಿ ಬದಲಾವಣೆ ಆಗಲಿದೆ ಎಂದು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಹೇಳಿದರು. ಅವರು ಶನಿವಾರ ಅಧಿವ್ಯಕ್ತ ಪರಿಷತ್, ಮಂಗಳೂರು ಹಾಗೂ ಚಿಂತನ ಗಂಗಾ ಜಂಟಿಯಾಗಿ ಆಯೋಜಿಸಿದ ಏಕರೂಪ ನಾಗರಿಕ ಸಂಹಿತೆ – ಸಾಮಾಜಿಕ ನ್ಯಾಯ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಮಂಡಿಸಿದರು.

ಈಗಿರುವ ವಿವಿಧ ಕಾನೂನುಗಳಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನಕ್ಕೆ ಅಡಚಣೆ ಉಂಟಾಗಿ ಪ್ರಕರಣಗಳ ಇತ್ಯರ್ಥ ಜಟಿಲವಾಗುತ್ತದೆ. ಆದ್ದರಿಂದ ನ್ಯಾಯಾಲಯಗಳೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸರಕಾರಗಳಿಗೆ ಸೂಚಿಸಿವೆ ಎಂದು ಅರುಣ್ ಶ್ಯಾಮ್ ತಿಳಿಸಿದರು. ಪೊಸ್ಕೊ ಕಾಯ್ದೆ, ಅತ್ಯಾಚಾರ ಪ್ರಕರಣ, ಸಂತ್ರಸ್ತೆಗೆ ಪರಿಹಾರ ಸಹಿತ ಕೆಲವು ವಿಷಯಗಳಲ್ಲಿ ವೈಯಕ್ತಿಕ ಕಾನೂನು ಮತ್ತು ರಾಷ್ಟ್ರದ ಕಾನೂನುಗಳಲ್ಲಿ ಯಾವುದನ್ನು ಆಧರಿಸಿ ತೀರ್ಪು ನೀಡುವ ಬಗ್ಗೆ ನ್ಯಾಯಾಲಯಗಳಲ್ಲಿ ಗೊಂದಲ ಏರ್ಪಡುತ್ತಿದೆ. ಇದರಿಂದ ಸಂತ್ತಸ್ರೆಗೆ ಸಿಗಬೇಕಾದ ನ್ಯಾಯದಲ್ಲಿ ತೊಡಕು ಉಂಟಾಗುವ ಸಾಧ್ಯತೆ ಇದೆ.

ಯುಸಿಸಿ ಜಾರಿಗೆ ಬಂದರೆ ಮಹಿಳಾ ಸಬಲೀಕರಣಕ್ಕೂ ಹೊಸ ವ್ಯಾಖ್ಯಾನ ಬಂದು ಮಹಿಳಾ ಸಶಕ್ತಿಕರಣಕ್ಕೆ ಇದು ದಾರಿಯಾಗುತ್ತದೆ ಎಂದು ಅವರು ತಿಳಿಸಿದರು. ಈಗ ಇರುವ ಮೀಸಲಾತಿ ಅಥವಾ ಭವಿಷ್ಯದಲ್ಲಿ ಜಾರಿಗೆ ಬರಬಹುದಾದ ಯಾವ ಮೀಸಲಾತಿಗೂ ಯುಸಿಸಿಯಿಂದ ಯಾವ ತೊಂದರೆಯೂ ಇಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಹಂತದಲ್ಲಿಯೇ ಇದರ ಪರವಾಗಿ ಧ್ವನಿ ಎತ್ತಿದ್ದರು. ಆದರೆ ಕೆಲವರ ವಿರೋಧದಿಂದ ಇದು ಆವತ್ತು ಜಾರಿಗೆ ಬರಲು ಆಗಿರಲಿಲ್ಲ ಎಂದು ತಿಳಿಸಿದರು. ಪ್ರಸ್ತುತ ದೇಶದ ಲಾ ಕಮೀಷನ್ ಜನರ ಅಭಿಪ್ರಾಯ ಸಂಗ್ರಹಿಸಿ ರೂಪುರೇಶೆ ಸಿದ್ಧಪಡಿಸಿದ ಬಳಿಕ ಕೇಂದ್ರ ಸರಕಾರ ಕರಡು ಮಸೂದೆ ರಚಿಸಿ ಸಂಸತ್ತಿನಲ್ಲಿ ಮಂಡಿಸಲಿದೆ ಎಂದು ಅರುಣ್ ಶ್ಯಾಮ್ ತಿಳಿಸಿದರು.

ನಾಗರಿಕರು ವಿವಿಧ ಪ್ರಶ್ನೆಗಳನ್ನು ಕೇಳಿದರು. ಅರುಣ್ ಶ್ಯಾಮ್ ಅವರಿಗೆ ಭವ್ಯ ಪ್ರಭಾವಳಿಯಿಂದ ಅಲಂಕೃತಗೊಂಡ ದೇವರ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಚಿಂತನ ಗಂಗಾ ಸಂಘಟನೆಯ ಡಾ. ರಾಘವೇಂದ್ರ ಹೊಳ್ಳ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಧಿವ್ಯಕ್ತ ಪರಿಷತ್ ನ ಈಶ್ವರ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಅರುಣ್ ಜಿ ಶೇಟ್ ಪ್ರಾರ್ಥಿಸಿದರು. ಕಿರಣ್ ವಂದಿಸಿದರು. ಪೂಜಾ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!