Sunday, January 19, 2025
Sunday, January 19, 2025

ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಐ.ಆರ್.ಸಿ.ಎಂ.ಡಿ ನೀಡುತ್ತಿದೆ: ಮನೋಹರ್ ಪ್ರಸಾದ್

ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಐ.ಆರ್.ಸಿ.ಎಂ.ಡಿ ನೀಡುತ್ತಿದೆ: ಮನೋಹರ್ ಪ್ರಸಾದ್

Date:

ಪುತ್ತೂರು, ಜೂನ್ 29: 13 ವರ್ಷಗಳ ಹಿಂದೆ ತನ್ನ ಕಿರಿಯ ವಯಸ್ಸಿನಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ 5000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದ ಈ ದಂಪತಿಗಳ ಕೀರ್ತಿ ಮೆಚ್ಚತಕ್ಕದ್ದು. ಮಾತ್ರವಲ್ಲ ಈ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆದು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಲಿ ಎಂದು ಹಿರಿಯ ಪತ್ರಕರ್ತರಾದ ಮನೋಹರ್ ಪ್ರಸಾದ್ ಹೇಳಿದರು. ಅವರು ಗುರುವಾರ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು‌.

ಐ.ಆರ್.ಸಿ.ಎಂ.ಡಿ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಉತ್ತಮ ಬದುಕನ್ನು ರೂಪಿಸುವತ್ತ ಹೆಜ್ಜೆಯನ್ನಿಟ್ಟಿರುವುದು ಶ್ಲಾಘನೀಯ. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿ 100 ಪುಸ್ತಕವನ್ನು ಐ.ಆರ್.ಸಿ.ಎಂ.ಡಿ ಎಜ್ಯುಕೇಶನ್ ಸೆಂಟರ್ ಗೆ ದೇಣಿಗೆ ನೀಡುವುದಾಗಿ ತಿಳಿಸಿದರು. ಗೌರವ ಅತಿಥಿಗಳಾಗಿ ಆಗಮಿಸಿದ ದ.ಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಮಾತನಾಡಿ, ಉಚಿತವಾಗಿ ವಿದ್ಯಾಭ್ಯಾಸವನ್ನು ನೀಡುವುದೆಂದರೆ ಅದು ಸುಲಭದ ಮಾತಲ್ಲ. ಸರಕಾರಿ ಶಾಲೆಗೆ ಉಚಿತ ಅಬಾಕಸ್ ತರಬೇತಿ ನೀಡುವುದನ್ನು ಶ್ಲಾಘಿಸಿ ಸಂಸ್ಥೆಗೆ ಶುಭ ಹಾರೈಸಿದರು. ಕಹಳೆ ಕೇಬಲ್ ಟಿವಿ ಮುಖ್ಯಸ್ಥ ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಮಾತನಾಡಿ, ಒಂದು ಮಗುವಿಗೆ ಏನನ್ನು ಕಲಿಸಬೇಕು, ಹೇಗೆ ಕಲಿಸಬೇಕು, ಸಾಧನೆಯ ಹಾದಿಯನ್ನು ಸುಲಭವಾಗಿ ತಲುಪಲು ಶ್ರಮಿಸುತ್ತಿರುವ ಐ.ಆರ್.ಸಿ.ಎಂ.ಡಿ ಎಜ್ಯುಕೇಶನ್ ಸೆಂಟರ್ ನ ಕಾರ್ಯ ಶ್ಲಾಘನೀಯ. ಬೆಳ್ತಂಗಡಿಯಲ್ಲೂ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ತನ್ನ ಸಹ ಸಂಸ್ಥೆಯನ್ನು ಆರಂಭಿಸಲು ಸಹಕಾರವಿದೆ ಎಂದರು.

ಮತ್ತೋರ್ವ ಅತಿಥಿ ಸಂಜೀವಿನಿ ಕ್ಲಿನಿಕ್ ನ ಡಾ. ರವಿನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸುಳ್ಯ ಮತ್ತು ಪುತ್ತೂರಿನ ವಿದ್ಯಾರ್ಥಿಗಳು, ಪೋಷಕರು ಮತ್ತು ಇತರೆ ಗಣ್ಯರು ಪಾಲ್ಗೊಂಡಿದ್ದರು. ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಫುಲ್ಲ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ತರಬೇತುದಾರರಾಗಿರುವ ಅಕ್ಷತಾ ಸ್ವಾಗತಿಸಿ, ಸಂಸ್ಥೆಯ ಮತ್ತೋರ್ವ ತರಬೇತುದಾರರಾಗಿರುವ ಹರ್ಷಿತಾ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಬಾಲಕೃಷ್ಣ ನಿರೂಪಿಸಿದರು.

ಐ.ಆರ್.ಸಿ.ಎಂ.ಡಿ ಸಂಸ್ಥೆಗೆ ಚಾಂಪಿಯನ್ ಪ್ರಶಸ್ತಿ: ಟಿ.ಆರ್.ಎಸ್ ಸಂಸ್ಥೆ ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ 32 ವಿದ್ಯಾರ್ಥಿಗಳು ಭಾಗವಹಿಸಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಸಂಸ್ಥೆಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ ತಂದಿರುತ್ತಾರೆ. ಚಾಂಪಿಯನ್ 2023 ಪ್ರಶಸ್ತಿಯನ್ನು ಕೃಪಾಹರಿ ಎಂ ರೈ (ವಿದ್ಯಾರಶ್ಮಿ ವಿದ್ಯಾಲಯ ಸವಣೂರು), ಚಿರಾಗ್ ಎಂ.ಎಲ್ (ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ), ಜೆಸ್ವಿತ್ ಕೆ. ಸಿ (ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ) ಕ್ರಮವಾಗಿ ಪಡೆದರು. ಟಾಪರ್ಸ್ 2023 ಪ್ರಶಸ್ತಿಯನ್ನು ಪ್ರಣತಿ ಬಂಗಾರಕೋಡಿ (ವಿವೇಕಾನಂದ ಕ. ಮಾ ಶಾಲೆ ಪುತ್ತೂರು), ಪೃಥ್ವಿ ಎನ್(ಮಾಯಿದೆ ದೇವುಸ್ ಕ. ಮಾ ಶಾಲೆ ಪುತ್ತೂರು), ಯಶ್ಮಿತಾ ರಾವ್ (ಕೆಪಿಎಸ್ ಗಾಂಧಿನಗರ ಸುಳ್ಯ ), ವಿನ್ನರ್ಸ್ 2023 ಪ್ರಶಸ್ತಿಯನ್ನು ತನಯ ಕೆ.(ಸಂತ ವಿಕ್ಟರನ ಆ.ಮಾ ಶಾಲೆ ಪುತ್ತೂರು ), ತಪಸ್ಯ (ಅಂಬಿಕಾ ವಿದ್ಯಾಲಯ ಪುತ್ತೂರು), ಅರ್ಜುನ್ ನವೀನ್ (ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ), ಭಾನ್ವಿ(ಲಿಟ್ಲ್ ಫ್ಲವರ್ ಕ. ಮಾ ಶಾಲೆ ಪುತ್ತೂರು), ರನ್ನರ್ಸ್ 2023 ಪ್ರಶಸ್ತಿಯನ್ನು ಆಶ್ವಿಕೃಷ್ಣ (ಲಿಟ್ಲ್ ಫ್ಲವರ್ ಕ.ಮಾ ಶಾಲೆ ಪುತ್ತೂರು), ಆಹನ್ ಜೈನ್ (ಸಂತ ವಿಕ್ಟರನ ಆ.ಮಾ ಶಾಲೆ ಪುತ್ತೂರು ) ವೃತಿಕಾ (ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ), ಶ್ಲೋಕ್ ಎಸ್ ನಾಯ್ಕ್ (ಜೈ ಮಾತಾ ಸ್ಕೂಲ್ ಕಾಸರಗೋಡು) ಕ್ರಮವಾಗಿ ಪಡೆದರು. ಬೆಸ್ಟ್ ಪರ್ಫಾರ್ಮರ್ ಆಗಿ ಆಶಿಶ್ ಗೌಡ (ವಿವೇಕಾನಂದ ಆ.ಮಾ ಶಾಲೆ ಪುತ್ತೂರು), ಹವೀಶ್ ಬಿ.ಕೆ (ಸಂತ ರೀಟಾ ಆ. ಮಾ ಶಾಲೆ ವಿಟ್ಲ ), ಇಚ್ಚಿಕಾ ಜೈನ್ (ಸಂತ ವಿಕ್ಟರನ ಆ. ಮಾ ಶಾಲೆ ಪುತ್ತೂರು), ಸಾತ್ವಿಕ್ ಕೆ.ಸಿ (ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ) ಕ್ರಮವಾಗಿ ಪಡೆದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!