ಉಡುಪಿ: ಉಡುಪಿ ನಗರದ ಹೃದಯ ಭಾಗದಲ್ಲಿರುವ ಮಾಂಡವಿ ಎಕ್ರೊಪೊಲಿಸ್ ನಲ್ಲಿ ಜಲಸಂರಕ್ಷಣೆಯ ಅಭಿಯಾನದ ಭಾಗವಾಗಿ ಮಳೆ ನೀರು ಕೊಯ್ಲು ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷರಾದ ಸುಕುಮಾರ ಶೆಟ್ಟಿ, ಉಪಾಧ್ಯಕ್ಷರಾದ ಸತೀಶ್ ಹೆಗ್ಡೆ, ಕಾರ್ಯದರ್ಶಿ ರಾಘವ ನಾಯಕ್, ಕೋಶಾಧಿಕಾರಿ ಫಿಲಿಪ್ ಡಿಸೋಜ, ಲ್ಯಾನ್ಸಿ ಡಯಾಸ್, ನಿಶಾಂತ್ ಉಪಸ್ಥಿತರಿದ್ದರು.
ಡಾ. ಶ್ರೀ ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಗಣಪತಿ ಕಾಮತ್, ಸಂತೋಷ್ ಮಾರ್ಗದರ್ಶನದಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.