Thursday, October 10, 2024
Thursday, October 10, 2024

ಅಕಾಲಿಕ ಮಳೆ, ಸಿಡಿಲು- ಉಡುಪಿ ಜಿಲ್ಲೆಯ ಹಲವೆಡೆ ಹಾನಿ

ಅಕಾಲಿಕ ಮಳೆ, ಸಿಡಿಲು- ಉಡುಪಿ ಜಿಲ್ಲೆಯ ಹಲವೆಡೆ ಹಾನಿ

Date:

ಉಡುಪಿ: ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ಹಲವೆಡೆ ಹಾನಿಯಾಗಿವೆ. ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಕುಶಲ ನಾಯ್ಕ ಬಿನ್‌ ಪರಮ ನಾಯ್ಕ ಇವರ ಮನೆಯ 2 ಜಾನುವಾರು ಸಿಡಿಲು ಬಡಿದು ಮೃತಪಟ್ಟಿದ್ದು ಅಂದಾಜು ರೂ 60000 ನಷ್ಟವಾಗಿದೆ.

ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಬೇಬಿ ಶೆಡ್ತಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು ಅಂದಾಜು ರೂ 75000 ನಷ್ಟವಾಗಿದೆ.

ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ರಮೇಶ್‌ ರಾವ್‌ ಬಿನ್‌ ಅಣ್ಣಪ್ಪಯ್ಯ ಇವರ ವಾಸ್ತವ್ಯದ ಪಕ್ಕಾ ಮನೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದ್ದು ಅಂದಾಜು ರೂ 6000 ನಷ್ಟವಾಗಿದೆ.

ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ಗ್ರಾಮದ ಮಧುಕರ ಸುವರ್ಣ ಬಿನ್‌ ಶೀನ ಕುಂದರ್‌ ಇವರ ವಾಸ್ತವ್ಯದ ಪಕ್ಕಾ ಮನೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿ ಅಂದಾಜು 8000 ರೂ ನಷ್ಟವಾಗಿದೆ.

ಬ್ರಹ್ಮಾವರ ತಾಲೂಕಿನ ಪದ್ದು ಗಾಣಿಗ ಬಿನ್‌ ಮಾಧವ ಇವರ ವಾಸ್ತವ್ಯದ ಪಕ್ಕಾ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿ ಅಂದಾಜು ರೂ 20000 ನಷ್ಟವಾಗಿದೆ.

ಬ್ರಹ್ಮಾವರ ತಾಲೂಕಿನ 38 ಕಳ್ತೂರು ಗ್ರಾಮದ ಶಾರದಾ ಬಾಯಿ ಕೋಂ ಸುಬ್ಬ ನಾಯ್ಕ ಇವರ ವಾಸ್ತವ್ಯದ ಪಕ್ಕಾ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿ ಅಂದಾಜು ರೂ 40000 ನಷ್ಟವಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರತನ್ ಟಾಟಾ ವಿಧಿವಶ

ಮುಂಬಯಿ, ಅ.10: ಟಾಟಾ ಸನ್ಸ್‌ನ ರತನ್ ಟಾಟಾ ಬುಧವಾರ ನಿಧನರಾದರು. ಅವರಿಗೆ...

ಅ.11: ಉಡುಪಿ ನಗರದಲ್ಲಿ ಕಸ ಸಂಗ್ರಹಣೆ ಇಲ್ಲ

ಉಡುಪಿ, ಅ.9: ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 11 ರಂದು ನಗರ...

ಯುವಜನರು ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು: ವಾರ್ತಾಧಿಕಾರಿ ಮಂಜುನಾಥ್ ಬಿ

ಉಡುಪಿ, ಅ.9: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಎನ್.ಎಸ್.ಎಸ್ ನಂತಹ ಕಾರ್ಯಚಟುವಟಿಕೆಗಳಲ್ಲಿ...

ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕು: ಜಿಲ್ಲಾಧಿಕಾರಿ

ಉಡುಪಿ, ಅ.9: 14 ವರ್ಷದೊಳಗಿನ ಬಾಲ ಕಾರ್ಮಿಕರುಗಳು ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ...
error: Content is protected !!