ಮಣಿಪಾಲ: ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಪ್ರಾಯೋಜಿಸುವ ’ಶುದ್ಧ ಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ’ ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ವಿಶ್ವ ಮಾನವೀಯ ದಿನದ ಪ್ರಯುಕ್ತ ’ಸ್ವಚ್ಛಾಗ್ರಹಿಗಳು ಮತ್ತು ಮಾನವರ ವರ್ತನೆಗಳು’ ಕುರಿತು ನುಡಿಚಿತ್ರ ಆಗಸ್ಟ್ 20ರಂದು ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.
ಜಿಲ್ಲಾ ಪಂಚಾಯತ್ ನ ಸ್ವಚ್ಛಭಾರತ್ ಮಿಷನ್-ಸ್ವಚ್ಛತೆ ಮತ್ತು ನೈರ್ಮಲ್ಯತೆ ವಿಭಾಗದ ಸಮಾಲೋಚಕರಾಗಿರುವ ಸಹನಾ ಹೆಗಡೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡದ ಕಲ್ಪನಾ ಭಾಸ್ಕರ್ ಹಾಗೂ ಸಿದ್ದಾಪುರ ಎಸ್.ಎಲ್.ಆರ್.ಎಂ ಘಟಕದ ಮೇಲ್ವಿಚಾರಕಿ ದಮಯಂತಿ ಪಾಲ್ಗೊಳ್ಳಲಿದ್ದಾರೆ ಎಂದು ರೇಡಿಯೋ ಮಣಿಪಾಲ್ ಪ್ರಕಟಣೆ ತಿಳಿಸಿದೆ.