ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂಪಾರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರಿಗೆ ಬಂದಿರುವ ಒಂದು ಕೋಟಿ ಇಪ್ಪತ್ತೈದು ಲಕ್ಷ ಲಾಭಾಂಶವನ್ನು ಶಂಕರನಾರಾಯಣ ಹಾಲು ಉತ್ಪಾದಕರ ಸಭಾಂಗಣದಲ್ಲಿ ಶಂಕರನಾರಾಯಣ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಅವರು ವಿತರಣೆ ಮಾಡಿದರು.
ಕುಂದಾಪುರ ತಾಲೂಕಿನ ಯೋಜನಾಧಿಕಾರಿಗಳಾದ ಮುರಳೀಧರ ಕೆ. ಶೆಟ್ಟಿ, ಯೋಜನೆಯ ಸದಸ್ಯರಿಗೆ ಸಂಘ ಬಲವರ್ಧನೆಯ ಬಗ್ಗೆ ಮತ್ತು ಲಾಭಾಂಶದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಳ್ಳುಂಜೆ ಒಕ್ಕೂಟದ ಅಧ್ಯಕ್ಷೆ ಅಂಬಿಕಾ ವಹಿಸಿದ್ದರು. ಸೇವಾ ಪ್ರತಿನಿಧಿಗಳಾದ ಕಸ್ತೂರಿ, ಮಲ್ಲಿಕಾ, ಸರಿತ, ಸವಿತಾ, ನಾಗರತ್ನ, ರಕ್ಷಿತಾ, ಆಜ್ವಿನ್, ಕಾರ್ತಿಕ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಶೈನ ಸ್ವಾಗತಿಸಿ, ನವರತ್ನ ಶೆಟ್ಟಿ ವಂದಿಸಿದರು, ಅಂಪಾರು ವಲಯ ಮೇಲ್ವಿಚಾರಕಿ ಮಾಲತಿ ಪಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.