Sunday, November 24, 2024
Sunday, November 24, 2024

ಹಾಲಾಡಿ- ಅಂಚೆ ಪೆಟ್ಟಿಗೆ ವಿನ್ಯಾಸ ಬಹುಮಾನ ವಿತರಣೆ ಕಾರ್ಯಕ್ರಮ

ಹಾಲಾಡಿ- ಅಂಚೆ ಪೆಟ್ಟಿಗೆ ವಿನ್ಯಾಸ ಬಹುಮಾನ ವಿತರಣೆ ಕಾರ್ಯಕ್ರಮ

Date:

ಹಾಲಾಡಿ: ಜೇಸಿಐ ಶಂಕರನಾರಾಯಣ, ಅಂಚೆಕಛೇರಿ ಹಾಲಾಡಿ 76 ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ಸರಕಾರಿ ಪದವಿಪೂರ್ವ ಕಾಲೇಜು (ಹೈಸ್ಕೂಲು ವಿಭಾಗ) ಹಾಲಾಡಿ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಅಂಚೆ ಪೆಟ್ಟಿಗೆ ವಿನ್ಯಾಸ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಹೆಗ್ಗುಂಜೆ ರಾಜೀವ ಶೆಟ್ಟಿ ಸರಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನಚಂದರ್ ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿ ಅಂಚೆ ಇಲಾಖೆಯು ವಿದ್ಯಾರ್ಥಿಗಳಿಗಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವಂತೆ ಮಾರ್ಗದರ್ಶನ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗಾಗಿ ಇಂತಹ ಸ್ಪರ್ಧೆಯನ್ನು ನಡೆಸುವುದರ ಮೂಲಕ ಅಂಚೆ ಕಚೇರಿಯ ಹಣಕಾಸು ವ್ಯವಹಾರ ಹಾಗೂ ಪತ್ರ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ಗ್ರಾಮೀಣ ಪ್ರದೇಶದ ಹಾಲಾಡಿ 76 ಶಾಖಾ ಅಂಚೆ ಕಛೇರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಜೇಸಿಐ ಶಂಕರನಾರಾಯಣದ ಅಧ್ಯಕ್ಷರಾದ ರತೀಶ್ ಕನ್ನಂತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ರೋಶನ್ ಬೀಬಿ ಉಪಸ್ಥಿತರಿದ್ದು, ಜೇಸಿಐ ಶಂಕರನಾರಾಯಣ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷವೂ ಹಲವಾರು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವಂತೆ ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಅಂಚೆ ಕಚೇರಿಯ ಹಣಕಾಸು ವ್ಯವಹಾರ ಹಾಗೂ ಪತ್ರ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ಕಛೇರಿಯು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.

ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗವು ವ್ಯವಹಾರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸದಾ ಗುರುತಿಸಿಕೊಳ್ಳುತ್ತಿದ್ದು ಅಂಚೆ ಇಲಾಖೆಗೂ ಮಾತ್ರವಲ್ಲದೇ ಉಡುಪಿ ವಿಭಾಗದ ಅಂಚೆ ಗ್ರಾಹಕರಿಗೂ ಹೆಮ್ಮೆ ಎನಿಸಿದ್ದು ಸರಳ ಸಜ್ಜನಿಕೆಯ ಅಂಚೆ ಅಧೀಕ್ಷಕರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಶಂಕರನಾರಾಯಣ ಜೇಸಿಐನ ನಿಕಟಪೂರ್ವ ಅಧ್ಯಕ್ಷ ಗುರುದತ್ತ ಶೇಟ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಲಾಡಿ 76 ಶಾಖಾ ಅಂಚೆ ಕಛೇರಿಯ ಅಂಚೆಪಾಲಕ ಪ್ರವೀಣ್ ನಾಯ್ಕ ಬಾಳೆಕೊಡ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಹಾಗೂ ಯಕ್ಷಗಾನ ತರಬೇತುದಾರರಾದ ಕಿಶೋರ್ ಕುಮಾರ್ ಆರೂರು, ಶಿಕ್ಷಕರಾದ ಗಣಪ, ಶಾಂತಿ, ಶ್ರೀಮತಿ ಐತಾಳ್, ಶ್ರೀಲತಾ, ಅಂಚೆ ಸಿಬ್ಬಂದಿ ರಮೇಶ ನಾಯ್ಕ ಹಾಗೂ ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಕೋಟೇಶ್ವರ ಅಂಚೆ ಕಚೇರಿಯ ಉಪ ಅಂಚೆಪಾಲಕಿ ಪೂರ್ಣಿಮಾ, ಅಂಚೆ ಸಹಾಯಕಿ ಉಷಾ ಕುಮಾರಿ ಹಾಗೂ ಭಾಗೀರಥಿ ಸಹಕರಿಸಿದರು.

ಪ್ರಥಮ ಬಹುಮಾನ 10ನೇ ತರಗತಿಯ ಶ್ರೀನಿಧಿ ಆರ್., ದ್ವಿತೀಯ ಬಹುಮಾನ 10ನೇ ತರಗತಿಯ ಅರುಣ್ ಹಾಗೂ ತೃತೀಯ ಬಹುಮಾನವನ್ನು 9ನೇ ತರಗತಿಯ ಸನ್ನಿಧಿ ಪಡೆದಿರುತ್ತಾರೆ. ಹೈಸ್ಕೂಲು ವಿಭಾಗದಲ್ಲಿ ಅತೀ ಹೆಚ್ಚು ಗಾಜಿನ ಬಳೆ ಧರಿಸಿದ ವಿದ್ಯಾರ್ಥಿನಿ 10ನೇ ತರಗತಿಯ ಪೂಜಾರರವರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.

ಶಿಕ್ಷಕ ನಾಗೇಂದ್ರ ಸ್ವಾಗತಿಸಿ, ಶಿಕ್ಷಕಿ ಸವಿತಾ ಕುಮಾರಿ ವಂದಿಸಿದರು. ಶಿಕ್ಷಕ ಹರೀಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!