ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟುಹಬ್ಬದ ಆಚರಣೆ ಸಲುವಾಗಿ ಮೋದಿ ಪ್ರಧಾನ ಮಂತ್ರಿಯಾದ ನಂತರ ಸತತ ಏಳನೇ ವರ್ಷ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿ ನೇತೃತ್ವದಲ್ಲಿ ಸಾರ್ವಜನಿಕರಿಗೆ ಹಾಲು ಪಾಯಸ ವಿತರಿಸಲಾಯಿತು.
ಇಂದು ಉಡುಪಿ ಕಡಿಯಾಳಿ ಹೋಟೆಲ್ ಶ್ರೀನಿವಾಸ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ಮತ್ತು ಯು. ಕಮಲಾಬಾಯಿ ಹೈಸ್ಕೂಲಿನ ಲಸಿಕಾ ಕೇಂದ್ರಗಳಲ್ಲಿ ಸುಮಾರು 500 ಮಂದಿಗೆ ಉಚಿತವಾಗಿ ಹಾಲು ಪಾಯಸ ವಿತರಿಸಲಾಯಿತು.

ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಎಂ.ಅಂಚನ್, ನಗರಸಭಾ ಸದಸ್ಯರಾದ ಗೀತಾ ಶೇಟ್, ಹೋಟೆಲ್ ಶ್ರೀನಿವಾಸ ಮಾಲಕರಾದ ನರಸಿಂಹ ಕಿಣಿ, ವಿನಯ ಕಿಣಿ, ಕಡಿಯಾಳಿ ಗಣೇಶೋತ್ಸವ ಸಮಿತಿಯ ಸದಸ್ಯರಾದ ಶಶಿಕಲಾ ಭರತ್, ಸಂಧ್ಯಾ ಪ್ರಭು, ಆರತಿ ಶೆಟ್ಟಿ, ಸುರೇಶ್ ಶೇರಿಗಾರ್ ಕಡಿಯಾಳಿ ಉಪಸ್ಥಿತರಿದ್ದರು.

