ಉಡುಪಿ: ನವರಾತ್ರಿಯ ಪರ್ವಕಾಲದಲ್ಲಿ ಕ್ರಿಸ್ತ ಶಕ ಸುಮಾರು 6ನೇ ಶತಮಾನದಲ್ಲಿ ಪ್ರತಿಷ್ಟಾಪಿಸಲ್ಪಟ್ಟು ಉಡುಪಿಯ ಶ್ರೀ ಕೃಷ್ಣ ಮಠಕ್ಕೂ ಅವಿನವಭಾವ ಸಂಬಂಧವಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಪೇಜಾವರ ಮಠಾಧೀಶ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಚಿತ್ತೈಸಿ ದೇವರ ದರ್ಶನ ಮಾಡಿದರು.
ಶ್ರೀ ದೇವಸ್ಥಾನ ವತಿಯಿಂದ ದೇವಳದ ಪವಿತ್ರಪಾಣಿ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ ಗೌರವ ಸಲ್ಲಿಸಿದರು. ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಕೆ. ನಾಗರಾಜ ಶೆಟ್ಟಿ, ಮಂಜುನಾಥ್ ಹೆಬ್ಬಾರ್, ರಮೇಶ್ ಶೇರಿಗಾರ್, ಸಂಧ್ಯಾ ಪ್ರಭು, ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ರಾಮಚಂದ್ರ ಸನಿಲ್ ಕಡಿಯಾಳಿ, ಭಾರತೀ ಚಂದ್ರಶೇಖರ್, ದೇವಳದ ಅರ್ಚಕರು, ಸಿಬ್ಬಂದಿ ವರ್ಗ, ನೂರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.