ಬ್ರಹ್ಮಾವರ: ನಾವು ಮಾಡುವ ಉದ್ಯಮದಲ್ಲಿ ಕೆಲವೊಮ್ಮೆ ಏರುಪೇರು ನಡೆಯುವುದು ಸಹಜವಾಗಿರುತ್ತದೆ. ಈ ಸಮಯದಲ್ಲಿ ನಾವು ತಾಳ್ಮೆಯಿಂದ ಅದನ್ನು ಎದುರಿಸಬೇಕು ಎಂದು ಉಡುಪಿ ರೂಫ್ ಪ್ಲಾಸ್ಟ್ ಉದ್ಯಮದ ಮಾಲಕರಾದ ಕೆ.ಸಿ.ಅಮೀನ್ ಹೇಳಿದರು.
ಅವರು ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ, ತಾನು ನಡೆದು ಬಂದ ದಾರಿಯ ಅನುಭವವನ್ನು ಹಂಚಿಕೊಂಡು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಲಕ್ಷೀಶ್ ಎ.ಜಿ ವಹಿಸಿ ಮಾತನಾಡಿ, ಬ್ಯಾಂಕಿನ ಜೊತೆ ಉತ್ತಮ ವ್ಯವಹಾರ ನಡೆಸಿ, ಯಶಸ್ವಿ ಉದ್ಯಮಿಗಳಾಗಿ ಎಂದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಸಂತೋಷ ಶೆಟ್ಟಿ ವಂದಿಸಿದರು. ಶಿಬಿರಾರ್ಥಿ ವರುಣ ಪ್ರಾರ್ಥಿಸಿದರು, ನೈಯಿಮ್ ಬಾಷ ಕುತ್ಲೂರು, ಸಾಗರ, ಕರವಾರ, ಮಂಜುನಾಥ ಕೊರ್ಗಿ ತರಬೇತಿಯ ಅನುಭವ ಹಂಚಿಕೊಂಡರು.