ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿಯ, ಶ್ರೀ ಜಗದ್ಗುರು ನಿತ್ಯಾನಂದ ಸ್ವಾಮೀಜಿ ಮಂದಿರ- ಮಠದಲ್ಲಿ 60 ನೇ ವರ್ಷದ ವಾರ್ಷಿಕೋತ್ಸವ ಮತ್ತು ಭಜನಾ ಕಾರ್ಯಕ್ರಮ, ಬಾಲಭೋಜನ, ಅನ್ನಸಂತರ್ಪಣೆ, ಪಲ್ಲಕಿ ಉತ್ಸವ ಪ್ರಸಾದ ವಿತರಣೆ, ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಪುತ್ತೂರು ಹಯವದನ ತಂತ್ರಿಯವರ ಪೌರೋಹಿತ್ಯದಲ್ಲಿ ನಡೆಯಿತು.
ಆಡಳಿತ ಮಂಡಳಿಯ ಗೌರವಾಧ್ಯಕ್ಷರಾದ ಕಪ್ಪೆಟ್ಟು ಸೂರ್ಯಪ್ರಕಾಶ್ ಅವರು್ ನಂದಾದೀಪ ಪ್ರಜ್ವಲಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾದ ಉಜ್ವಲ್ ಡೆವಲ್ಪರ್ಸ್ ಪಿ. ಪುರುಷೋತ್ತಮ ಶೆಟ್ಟಿ, ಕಾರ್ಯಾಧ್ಯಕ್ಷರಾದ ದಿವಾಕರ್ ಶೆಟ್ಟಿ ತೋಟದಮನೆ- ಕೊಡವೂರು, ಅಧ್ಯಕ್ಷರಾದ ಎರ್ಮಾಳು ಶಶಿಧರ್ ಕೆ. ಶೆಟ್ಟಿ, ಉಪಾಧ್ಯಕ್ಷ ಭೋಜರಾಜ್ ಆರ್ ಕಿದಿಯೂರ್, ಕಾರ್ಯದರ್ಶಿ ಯೋಗೀಶ್ ಶಾನಭೋಗ್ ಪಾಂಗಳ, ಕೋಶಾಧಿಕಾರಿ ಉದಯಕುಮಾರ್ ಶೆಟ್ಟಿ ಬನ್ನಂಜೆ, ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ, ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಹಿಳಾ ಸದಸ್ಯರು, ಸದ್ಗುರು ಭಕ್ತವೃಂದ, ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಗುರು ನಾರಾಯಣ ಭಜನಾ ಮಂಡಳಿ ಬನ್ನಂಜೆ, ಶ್ರೀ ನಿತ್ಯಾನಂದ ಮಂದಿರ ಪುರುಷ ಹಾಗೂ ಮಹಿಳಾ ಭಜನಾ ಮಂಡಳಿ, ಶ್ರೀ ವಿಷ್ಣು ಭಜನಾ ಮಂಡಳಿ ಎರ್ಮಾಳ್, ಶ್ರೀ ಗೀತಾ ಭಜನಾ ಮಂಡಳಿ ಉಡುಪಿ, ಶ್ರೀ ವೀರವಿಠಲ ಭಜನಾ ಮಂಡಳಿ ಮಣಿಪಾಲ, ಮಾತೃ ಮಂಡಳಿ ಕಡಿಯಾಳಿ, ಮಹಾಲಸಾ ಭಜನಾ ಮಂಡಳಿ ತೋನ್ಸೆ, ಶ್ರೀ ನಿತ್ಯಾನಂದ ಭಜನಾ ಮಂದಿರ ಗಣೇಶಪುರ ಕಾಟಿಪಳ್ಳ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಮಲ್ಪೆ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರುಗಿತು.