ಕಾರ್ಕಳ: ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಹಭಾಗಿತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಕಂಪ್ಯೂಟರ್ ಲ್ಯಾಬ್ ನ್ನು, ಕಾರ್ಕಳದ ಸಮಾಜ ಸೇವಕರಾದ ಮೋಹನ್ ಶೆಣೈ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಭಾರತೀಯರು ಪ್ರಪಂಚದೆಲ್ಲೆಡೆ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಸಂಸ್ಥೆಯಿಂದ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಮಾತನಾಡಿ, ಸಂಸ್ಥೆ ಇಷ್ಟು ಎತ್ತರದ ಸಾಧನೆಗಳನ್ನು ಮಾಡುವುದಕ್ಕೆ ಇಲ್ಲಿರುವ 220 ಸಿಬ್ಬಂದಿಗಳ ಒಮ್ಮತದ ದುಡಿಮೆ ಕಾರಣ. ಅವರೆಲ್ಲರಿಗೂ ನಾನು ಕೃತಜ್ಞ.
ಈ ನೂತನ ಲ್ಯಾಬ್‌ನೊಂದಿಗೆ ಸಂಸ್ಥೆಯ ಕಂಪ್ಯೂಟರ್‌ಗಳ ಸಂಖ್ಯೆ 260 ಕ್ಕೆ ಏರಿ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪೂರಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಅರುಣಾ ಶೆಣೈ, ಎ.ಪಿ.ಜಿ.ಇ.ಟಿ.ಯ ಟ್ರಸ್ಟಿ ಕರುಣಾಕರ ಶೆಟ್ಟಿ, ಗವರ್ನಿಂಗ್ ಕೌನ್ಸಿಲ್ ಸದಸ್ಯ ಅನಿಲ್ ಕುಮಾರ್ ಜೈನ್, ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರು, ಉಪಪ್ರಾಂಶುಪಾಲರಾದ ಸಾಹಿತ್ಯ, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ಉಷಾ ರಾವ್ ಯು., ಉಪಪ್ರಾಂಶುಪಾಲರಾದ ವಾಣಿ ಕೆ., ಹಿತೈಷಿಗಳಾದ ತ್ರಿವಿಕ್ರಮ ಕಿಣಿ, ಡಾ. ಪ್ರಸನ್ನ, ಇಂಜಿನಿಯರ್ ಪುಷ್ಪರಾಜ್, ಬೋಧಕ, ಬೋಧಕೇತರರು ಉಪಸ್ಥಿತರಿದ್ದರು.
ಉಪನ್ಯಾಸಕ ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.