ಉಡುಪಿ: ಒಲಂಪಿಕ್ಸ್ ನಲ್ಲಿ ಜಾವೆಲಿನ್ ತ್ರೋ ವಿಭಾಗದಲ್ಲಿ ಸ್ವರ್ಣ ಪದಕವನ್ನು ಗಳಿಸಿದ ನೀರಜ್ ಚೋಪ್ರಾ ರವರ ತರಬೇತುದಾರರಾಗಿದ್ದ ಕಾಶೀನಾಥ್ ನಾಯಕ್‌ರವರು ಉಡುಪಿಯ ಶಾರದಾ ರೆಸಿಡೆನ್ಶಿಯಲ್ ಶಾಲೆಗೆ ಭೇಟಿ ನೀಡಿದರು.
ಕ್ರೀಡೆಯು ಸೋತವರನ್ನು ಎಂದೆಂದಿಗೂ ಹಿಮ್ಮೆಟ್ಟಿಸದೆ, ಮುಂದೆ ಮತ್ತೊಮ್ಮೆ ಪ್ರಯತ್ನ ಮಾಡು ಎಂಬ ಪಾಠವನ್ನು ಕಲಿಸುತ್ತದೆ ಎಂದರು. ತಾನು ಹಾಗೂ ನೀರಜ್ ಚೋಪ್ರಾರವರು ಸೈನಿಕರಾಗಿದ್ದು ಕ್ರೀಡಾಪಟುವಲ್ಲದೆ ಮಾತೃಭೂಮಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಶಾಲೆಯ ವತಿಯಿಂದ ಕಾಶೀನಾಥ್ ನಾಯಕ್‌ರವರನ್ನು ನಿರ್ದೇಶಕರಾದ ವಿದ್ಯಾವಂತ ಆಚಾರ್ಯ ಹಾಗೂ ಪ್ರಾಂಶುಪಾಲರಾದ ಡಾ. ರಾಮಚಂದ್ರನ್‌ರವರು ಸನ್ಮಾನಿಸಿದರು.