ಮಣಿಪಾಲ: ಎಂಐಸಿ ಯ ಸ್ನಾತಕೋತ್ತರ ವಿಭಾಗವು ನಮ್ಮ ಅಂಗಡಿಯ 19 ನೇ ಆವೃತ್ತಿ ಏಪ್ರಿಲ್ 8, 9 ಮತ್ತು 10 ರಂದು ಮಣಿಪಾಲದ ಎಂಐಸಿ ಕ್ಯಾಂಪಸ್‌ನಲ್ಲಿ ನಡೆಯಲಿದೆ. ನಮ್ಮ ಅಂಗಡಿಯು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ‘ನಮ್ಮ ಭೂಮಿ’ ಮತ್ತು ‘ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್’ ಸಹಯೋಗದಲ್ಲಿ ಆಯೋಜಿಸುವ ವಾರ್ಷಿಕ ಪ್ರದರ್ಶನ ಮತ್ತು ಮಾರಾಟವಾಗಿದೆ.
ನಮ್ಮ ಅಂಗಡಿ, ಗ್ರಾಮೀಣ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಅವರ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶವನ್ನು ನೀಡುವ ವೇದಿಕೆ. ಈ ಮಾರಾಟ ಮೇಳ ಸ್ಥಳೀಯ ಕುಶಲಕರ್ಮಿಗಳನ್ನು ಉತ್ತೇಜಿಸುತ್ತದೆ, ಆ ಮೂಲಕ ಅವರಿಗೆ ವಾಣಿಜ್ಯ ಬ್ರಾಂಡ್‌ಗಳು ವಿಧಿಸುವ ಕಠಿಣ ಸ್ಪರ್ಧೆಯ ವಿರುದ್ಧ ಬದುಕುಳಿಯುವ ಅವಕಾಶವನ್ನು ನೀಡುತ್ತದೆ ಹಾಗು ಸ್ಥಳೀಯ ಮತ್ತು ಪಾರಂಪರಿಕ ಕರಕುಶಲಗಳು ಮರೆಯಾಗುತ್ತಿರುವ ಪರಿಣಾಮವನ್ನು ಎತ್ತಿ ತೋರಿಸುತ್ತದೆ.
ಏಪ್ರಿಲ್ 8, 9 ಮತ್ತು 10 ರಂದು ನಡೆಯಲಿರುವ ಈ ವರ್ಷದ ನಮ್ಮ ಅಂಗಡಿಯಲ್ಲಿ ಗೃಹಾಲಂಕಾರದಿಂದ ಹಿಡಿದು ಬೇಸಿಗೆ ಉಡುಪುಗಳವರೆಗೆ ಸಹಿತ ವಿವಿಧ ಶ್ರೇಣಿಯ ಉತ್ಪನ್ನಗಳಿವೆ. ಈ ವರ್ಷ, ಮೊದಲ ಬಾರಿಗೆ ಮಕ್ಕಳ ಉಡುಪುಗಳನ್ನೂ ಬಿಡುಗಡೆ ಮಾಡಲಾಗಿದ್ದು, ಮಕ್ಕಳ ಸಂಗ್ರಹವು ಜೈಪುರಿ ಕಾಟನ್ ಮತ್ತು ಕಲಾಮಾರಿಯಂತಹ ಫ್ಯಾಬ್ರಿಕ್ ನಿಂದ ಮಾಡಲ್ಪಟ್ಟಿದೆ.
ಈ ವರ್ಷ ಐಡಿಪಿ, ಕ್ಯಾಂಪ್ಕೋ, ಸೆಲ್ಕೊ, ಕೆನರಾ ಬ್ಯಾಂಕ್ ಮತ್ತು ಅಭ್ಯುದಯ ಬ್ಯಾಂಕ್ ಕಂಪನಿಗಳನ್ನು ಮಾರಾಟ ಮೇಳದ ಪ್ರಾಯೋಜಕರಾಗಿದ್ದಾರೆ. ಸುರಕ್ಷತಾ ಮುನ್ನೆಚ್ಚರಿಕೆಯಾಗಿ, ಪ್ರವೇಶಕ್ಕಾಗಿ ಕೋವಿಡ್ 19 ವ್ಯಾಕ್ಸಿನೇಷನ್ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.