Monday, February 24, 2025
Monday, February 24, 2025

ನಾಗರಿಕ ಸಮಿತಿಯಿಂದ 154 ಅನಾಥ ಶವಗಳ ಸದ್ಗತಿ ಸಂಸ್ಕಾರ

ನಾಗರಿಕ ಸಮಿತಿಯಿಂದ 154 ಅನಾಥ ಶವಗಳ ಸದ್ಗತಿ ಸಂಸ್ಕಾರ

Date:

ಕೊರೊನಾದಿಂದ ಮೃತಪಟ್ಟಿರುವ, ಅಪಘಾತ, ಕಾಯಿಲೆಗಳಿಂದ ಮೃತಪಟ್ಟಿರುವ 154 ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಗೌರಯುತವಾಗಿ ಇದುವರೆಗೆ ನಡೆಸಿಕೊಂಡು ಬಂದಿದೆ. ಶನಿವಾರ ಅಮವಾಸ್ಯೆಯ ಪ್ರಯುಕ್ತ 154 ಅನಾಥ ಆತ್ಮಗಳಿಗೆ ಸದ್ಗಗತಿ ಪ್ರಾಪ್ತಿಗಾಗಿ ಪೆರಂಪಳ್ಳಿ ಶೀಂಬ್ರಾ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಯಾಗ ಸಭಾಂಗಣದಲ್ಲಿ ಕರಂಬಳ್ಳಿ ನಾಗರಾಜ್ ಐತಾಳ್ ಸಾರಥ್ಯದ ಪುರೋಹಿತ ಬಳಗದಿಂದ, ತಿಲಹೋಮ, ನಾರಾಯಣ ಬಲಿ ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ನಡೆದವು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಮುಂದಾಳತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ಜರುಗಿದವು. ಪಿಂಡಗಳನ್ನು ಸುವರ್ಣ ನದಿಯ ಕೃಷ್ಣಾಂಗರಕ ಸ್ನಾನಘಟ್ಟದಲ್ಲಿ ಹರಿದುಬಿಡಲಾಯಿತು.

ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಕಾರ್ಯಕ್ರಮದ ಸಮಾಪನದಲ್ಲಿ ಉಪಸ್ಥಿತರಿದ್ದರು. ನಾಗರಿಕ ಸಮಿತಿಯವರು, ಸಾರ್ವಜನಿಕ ಸ್ಥಳದಲ್ಲಿ ನೆಲೆಕಂಡಿರುವ ನಿರ್ಗತಿಕರು, ಅನಾಥರನ್ನು ಆಸ್ಪತ್ರೆಗೆ ದಾಖಲಿಸುವ ಸೇವಾಕಾರ್ಯದಲ್ಲಿ ನಿರತವಾಗಿದೆ. ವಾರಸುದಾರರು ಇಲ್ಲದಿರುವ ಅನಾಥ ಶವಗಳಿಗೆ ಅನಾಥಪ್ರಜ್ಞೆ ಕಾಡದಂತೆ, ಬಂಧುಗಳಂತೆ ಅಂತ್ಯಸಂಸ್ಕಾರ ನಡೆಸಿದಲ್ಲದೆ, ಸದ್ಗತಿಯ ಸತ್ಕಾರ್ಯ ನಡೆಸಿರುವುದರ ಬಗ್ಗೆ ಅಪರ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಪೊಲೀಸ್ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ನಾಗರಿಕ ಸಮಿತಿಯ ಪದಾಧಿಕಾರಿಗಳಾದ ಮುರುಳಿಧರ್ ಬಲ್ಲಾಳ್, ಸ್ವಾತಿ ಎಮ್ ಬಲ್ಲಾಳ್, ಲಕ್ಷ್ಮೀ ಎಮ್ ಬಲ್ಲಾಳ್, ತಾರಾನಾಥ್ ಮೇಸ್ತ ಶಿರೂರು, ಕೆ. ಬಾಲಗಂಗಾಧರ ರಾವ್, ಪಾಡಿಗಾರ್ ಮುರಳಿಧರ್ ರಾವ್, ಗಣೇಶ್ ರಾಜ್ ಸರಳಬೆಟ್ಟು, ರಾಮದಾಸ್ ಪಾಲನ್, ಸುಶೀಲಾ ರಾವ್ ಉಡುಪಿ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!