Sunday, January 19, 2025
Sunday, January 19, 2025

ಮನೋರಂಜನೆಯ ಜೊತೆ ಚಿಂತನೆಗೆ ಇಂಬು ನೀಡಿದ ಮೃಡ

ಮನೋರಂಜನೆಯ ಜೊತೆ ಚಿಂತನೆಗೆ ಇಂಬು ನೀಡಿದ ಮೃಡ

Date:

ತ್ತೀಚಿಗೆ ಗಂಗೊಳ್ಳಿಯ ಬಿಲ್ಲವರ ಹಿತ ರಕ್ಷಣಾ ವೇದಿಕೆ ಆಶಯದಲ್ಲಿ ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿಯವರ ರಚನೆ ಮತ್ತು ನಿರ್ದೇಶನದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಪ್ರದರ್ಶಿಸಿದ ‘ಮೃಡ’ ನಾಟಕ ಜನರ ಮನಸ್ಸನ್ನು ರಂಜಿಸುವುದರ ಜೊತೆಗೆ ಚಿಂತನೆಗೆ ಹಚ್ಚಿಸುವಲ್ಲಿ ಯಶಸ್ವಿಯಾಯಿತು. ಸೃಜನಶೀಲತೆಯಿಂದ ಮಕ್ಕಳನ್ನು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮವಾದ ಮೌಲಿಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ಸಮಾಜಕ್ಕೆ ನೀಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ನಾಟಕ ಮೂಡಿ ಬಂದಿತ್ತು.

ಚಾರುಕೀರ್ತಿ ಹೆಸರಿನ ನಾಯಕ ತಾನೊಬ್ಬ ಮಹಾನ್ ಶಿವ ಭಕ್ತ. ಹಾಗಾಗಿ ಪುರಾಣದ ಪ್ರಸಿದ್ಧ ಭಕ್ತರ ಹೆಸರಿನಂತೆ ತನ್ನ ಹೆಸರು ಕೂಡ ರಾರಾಜಿಸಬೇಕು ಎನ್ನುವ ಅಹಂಕಾರದಲ್ಲಿ ಹೆಂಡತಿ ಮಗನನ್ನು ತೊರೆದು ಶಿವನನ್ನು ಹುಡುಕಿಕೊಂಡು ಅಘೋರಿಗಳ ತಾಣವನ್ನು ಸೇರಿ ಅನುಮಾನ, ಕ್ರೋಧ, ಮೋಹ, ಲಾಲಸೆಗಳಿಗೆ ಕಟ್ಟುಬಿದ್ದು ತಪ್ಪುಗಳನ್ನು ಮಾಡಿ ಕೊನೆಗೆ ಅಹಂಕಾರದ ಮದ ಕರಗಿ ಸಾವನ್ನು ತಾನೇ ಆಹ್ವಾನಿಸುವ ಪರಿಸ್ಥಿತಿಗೆ ಬಂದು ಜೀವನದ ಸತ್ಯದರ್ಶನವಾಗುವ ಕಥೆಯನ್ನು ಹೊಂದಿರುವ ಮೃಡ ನಾಟಕ ತನ್ನ ಭಿನ್ನ ಪ್ರಸ್ತುತಿ, ಅರ್ಥಗರ್ಭಿತ ಸಂಭಾಷಣೆಗಳು, ಹಲವು ತಿರುವುಗಳು ಮತ್ತು ಆಕರ್ಷಕವಾದ ವಿಶೇಷ ಪಾತ್ರಗಳು ಹಾಗು ಸನ್ನಿವೇಶಗಳಿಂದ ನೋಡುಗರ ಮನ ಗೆಲ್ಲುವಲ್ಲಿ ಸಫಲವಾಯಿತು

ಆರಂಭದಲ್ಲಿಯೇ ಶಿವಪೂಜೆ, ಅಘೋರಿಗಳ ಅಬ್ಬರದ ಪ್ರವೇಶ , ಕ್ಷುದ್ರಶಕ್ತಿ ಆರಾಧಕನ ಹಾರಾಟ, ಚಾರುಕೀರ್ತಿಯ ಮೇಲೆ ಸಾವಿನ ಆಕ್ರಮಣದ ಸನ್ನಿವೇಶಗಳು ಪರಿಣಾಮಕಾರಿಯಾಗಿ ಮೂಡಿಬಂದು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದವು. ವಿದ್ಯಾರ್ಥಿಗಳ ಸಮರ್ಥ ಅಭಿನಯ ಮತ್ತು ಹಿನ್ನೆಲೆ ಸಂಗೀತ ನಾಟಕದ ಪ್ಲಸ್ ಪಾಯಿಂಟ್ ಆಗಿತ್ತು. ಎರಡನೇ ಪ್ರಯೋಗದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡು ನಲವತ್ತು ವಿದ್ಯಾರ್ಥಿಗಳ ತಂಡ ನಾಟಕವನ್ನು ಯಶಸ್ವಿಯಾಗಿ ಪ್ರಸ್ತುತಪಡಿಸಿದ ರೀತಿ ಗ್ರಾಮೀಣ ಪ್ರತಿಭೆಗಳ ಸಾಮರ್ಥ್ಯಕ್ಕೆ ಕನ್ನಡಿಯಂತಿತ್ತು. ಚಾರುಕೀರ್ತಿಯಾಗಿ ಕ್ಷಮ ಆರ್ ಆಚಾರ್ಯ ಶ್ರೇಷ್ಠ ಮಟ್ಟದ ಅಭಿನಯವನ್ನು ನೀಡಿದರೆ, ಕ್ಷುದ್ರ ಶಕ್ತಿ ಆರಾಧಕಿಯಾಗಿ ಆಕಾಂಕ್ಷ ಆಚಾರ್ಯ ಸಾವಿನ ಪಾತ್ರದಲ್ಲಿ ಭೂಮಿಕ ಪೂಜಾರಿ, ವಿಲಾಸಿನಿಯಾಗಿ ವೆಲಿಟಾ ಲೋಬೊ, ಶಿರಿಗಾನಿಯಾಗಿ ಖುಷಿ, ಶಿವನಾಗಿ ಪ್ರತೀಕ್ಷಾ ಆಚಾರ್ಯ ಪ್ರೇಕ್ಷಕರ ಗಮನ ಸೆಳೆದರು

ಉಳಿದಂತೆ ಸನ್ನಿಧಿ ಕರ್ಣಿಕ್, ನಿಶಾ ಬಿ ಪೂಜಾರಿ, ವಿನ್ಯಾಸ್, ದೀಪ್ತಿ ಶೆಣೈ, ದಿಶಾ, ಶ್ರೇಯಲ್, ಧನ್ಯ ಯು,ಪ್ರಥ್ವಿ ಖಾರ್ವಿ, ಶ್ರೇಷ್ಠ ಮೇಸ್ತ, ಭಾರತಿ ಖಾರ್ವಿ, ದಾಕ್ಷಾಯಿಣಿ ಖಾರ್ವಿ, ವಜ್ರೇಶ್ ಶೆಣೈ, ಸುನಿಧಿ ಕರ್ಣಿಕ್, ಶ್ರೇಯ ಪೂಜಾರಿ, ನವ್ಯಶ್ರೀ ಕೋಟೆಗಾರ್ ಜೊತೆಯಲ್ಲಿ ಅಘೋರಿಗಳಾಗಿ ರೋಹಿತ್ ಪೂಜಾರಿ, ಶರಣ್ ಪೂಜಾರಿ, ಯುವರಾಜ ಖಾರ್ವಿ, ಶಮಿತ್ ಖಾರ್ವಿ, ಪ್ರಜ್ವಲ್ ಪುತ್ರನ್ ಸಂಕೇತ ಖಾರ್ವಿ, ಕೀರ್ತನ ಪಟೇಲ್ ಮತ್ತು ಸುಜಯ್ ಗಾಣಿಗ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಧ್ವನಿ ಮತ್ತು ಬೆಳಕಿನಲ್ಲಿ ಚೇತನ್ ಸೌಂಡ್ಸ್, ಹಿನ್ನೆಲೆ ಸಂಗೀತದಲ್ಲಿ ವೀರೇಶ್ ಖಾರ್ವಿ, ಶಮಿತ್ ಖಾರ್ವಿ, ಇಂಚರ ಆರ್ ದೇವಾಡಿಗ, ಸಂಜಿತ್ ಎಂ ದೇವಾಡಿಗ ಪ್ರಸಾದನದಲ್ಲಿ ಕಿರಣ್ ಬಳ್ಕೂರು ಸಹಕರಿಸಿದರು.

ಇರುವ ಸೀಮಿತ ಅವಕಾಶಗಳಲ್ಲಿ ವಿದ್ಯಾರ್ಥಿಗಳ ತಂಡವನ್ನು ಕಟ್ಟಿಕೊಂಡು ಅವರನ್ನು ತರಬೇತುಗೊಳಿಸಿ ಉನ್ನತ ವಿಚಾರ ಧಾರೆಯನ್ನು ಹೊಂದಿರುವ ಕಥಾವಸ್ತುವನ್ನು ಒಳಗೊಂಡ ನಾಟಕವನ್ನು ರಚಿಸಿ ನಿರ್ದೇಶಿಸಿ ಗ್ರಾಮೀಣ ಭಾಗದಲ್ಲಿಯೂ ಇಂತಹ ನಾಟಕಗಳನ್ನು ಪ್ರದರ್ಶಿಸಿ ಯಶಸ್ಸನ್ನು ಕಾಣಬಹುದು ಎನ್ನುವುದನ್ನು ತಮ್ಮ ಮೈಸೂರು ಮಲ್ಲಿಗೆ, ಮರಣಿ ಮಾಂಟೆ ಯಶಸ್ಸಿನ ಬಳಿಕ ಮೃಡ ನಾಟಕದ ಮೂಲಕ ಮತ್ತೊಮ್ಮೆ ತೋರಿಸಿದ ನರೇಂದ್ರ ಎಸ್ ಗಂಗೊಳ್ಳಿ ಅಭಿನಂದನಾರ್ಹರು.

(ಫೋಟೋ ಕೃಪೆ: ಸುರಭಿ ಕೃಷ್ಣ ಗಂಗೊಳ್ಳಿ)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!