ಸುರತ್ಕಲ್: ತಾಲಿಬಾನ್ ಉಗ್ರ ಸಂಘಟನೆಯಿಂದ ಪ್ರೇರಿತರಾಗಿ ಆಂತರಿಕವಾಗಿ ನಮ್ಮ ದೇಶದಲ್ಲಿಯೂ ಕಾನೂನು ಮುರಿಯುವ ದುಸ್ಸಾಹಸಕ್ಕೆ ಕೈ ಹಾಕಿದರೆ ಅಂತಹ ದೇಶವಿರೋಧಿ ಮನಸ್ಥಿತಿಯನ್ನು ಮಟ್ಟ ಹಾಕಲು ಸರಕಾರ ಬದ್ದವಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಎಚ್ಚರಿಕೆ ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರ ತೆಗೆಯಬೇಕೆಂದು ಪಟ್ಟು ಹಿಡಿದು ಕಬಕದಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಸ್ವಾತಂತ್ರ್ಯ ರಥವನ್ನು ತಡೆದ ಘಟನೆಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದರು.
ಇಂತಹ ಘಟನೆಗಳು ಸಹಿಸುವುದಿಲ್ಲ. ನಮ್ಮ ದೇಶದಲ್ಲಿ ಈ ನೆಲದ ಕಾನೂನು, ಪಾಲಿಸಿ ಅದನ್ನು ಗೌರವಿಸಿ ಬದುಕಬೇಕು ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.