Monday, February 24, 2025
Monday, February 24, 2025

ಮೇಗೂರು-ಪಂಚಮಿಕಲ್ಲು; 16-17 ನೇ ಶತಮಾನದ ಶಾಸನ ಪತ್ತೆ

ಮೇಗೂರು-ಪಂಚಮಿಕಲ್ಲು; 16-17 ನೇ ಶತಮಾನದ ಶಾಸನ ಪತ್ತೆ

Date:

ಜಯಪುರ: ಮೇಗುಂದಾ ಹೋಬಳಿ ಮೇಗೂರು ಸಮೀಪದ ಪಂಚಮಿ ಕಲ್ಲು ಎಂಬ ಸ್ಥಳದಲ್ಲಿ 16-17 ನೇ ಶತಮಾನಕ್ಕೆ ಸೇರಿದ ಶಿಲಾಶಾಸನವನ್ನು ಶ್ರೀಪಾಲ ಜೈನ್ ಅವರ ಮಾಹಿತಿಯ ಮೇರೆಗೆ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅವರು ಅಧ್ಯಯನ ಕೈಗೊಂಡಿರುತ್ತಾರೆ. ಪಂಚಮಿಕಲ್ಲಿನಲ್ಲಿರುವ ಪುಷ್ಕರಣಿಯಲ್ಲಿನ ಶಿಲೆಯ ಮೇಲೆ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ “ಶ್ರೀ ಬೊಮಣ ಸೆಟಿ ಮಗ ಕಟಿಗೆ…” ಎಂಬ ಒಂದು ಸಾಲಿನ ಶಾಸನವಿದೆ.

ಶಾಸನದ ಇನ್ನೂ ಕೆಲವು ಅಕ್ಷರಗಳು ತ್ರುಟಿತಗೊಂಡಿದ್ದು, ಈ ಪುಷ್ಕರಣಿಯನ್ನು ಬೊಮಣ ಸೆಟ್ಟಿಯ ಮಗ ನಿರ್ಮಾಣ ಮಾಡಿರಬಹುದೆಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಸನವಿರುವ ಪಕ್ಕದ ಬಂಡೆ ಕಲ್ಲಿನ ಕೆಳಭಾಗದಲ್ಲಿ “ಬೊಸೆಟಿ” ಎಂಬ ಬರಹವಿರುವ ಇನ್ನೊಂದು ಚಿಕಣಿ ಶಾಸನವಿದೆ.

ಜೈನರ ಪವಿತ್ರ ಕ್ಷೇತ್ರ ಪಂಚಮಿ ಕಲ್ಲಿನ ತುತ್ತ ತುದಿಯ ಬಂಡೆಯ ಮೇಲೆ ಸಲ್ಲೇಖನ ವಿಧಿಯಿಂದ ಮರಣಹೊಂದಿದ ಜೈನ ಮುನಿಗಳ ಸಮಾಧಿ ಇದ್ದು ಇಬ್ಬರು ಮುನಿಗಳ ಹೆಸರನ್ನು ಶಿಲೆಯಲ್ಲಿ ಕೊರೆಯಲಾಗಿದ್ದು ಅದರಲ್ಲಿ ಒಬ್ಬ ಮುನಿಗಳು ದೇವಚಂದ್ರ ಭಟ್ಟಾರಕರು, ಮತ್ತೊಬ್ಬ ಮುನಿಗಳ ಹೆಸರಿನ ಅಕ್ಷರ ನಾಶವಾಗಿದೆ.

ಇಲ್ಲಿರುವ ಬಂಡೆಕಲ್ಲಿನ ಮೇಲೆ ಶಾಸನವಿದ್ದು, ಬಹಳಷ್ಟು ತೃಟಿತಗೊಂಡಿರುವುದರಿಂದ ಓದಲು ಅಸಾಧ್ಯವಾಗಿದೆ. ಅದೇ ರೀತಿ ಪಗಡೆ ಆಟದ ರೇಖಾ ಚಿತ್ರ, ಕೆಲಸದ ಆಳುಗಳ ಲೆಕ್ಕವನ್ನು ಗೆರೆಯ ಮೂಲಕ ಮಾಡಿರುವುದನ್ನು ಗುರುತಿಸಲಾಗಿದೆ. ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಶ್ರೀ ಸುಧಾಕರ ಜೈನ್ ಕೊಗ್ರೆ ಅವರು ಸಹಕರಿಸಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!