Saturday, September 21, 2024
Saturday, September 21, 2024

ಸಂಸ್ಕೃತಿ ಮತ್ತು ಆಚರಣೆಗಳನ್ನು ಉಳಿಸಲು ಮಹತ್ವದ ಕೊಡುಗೆ ನೀಡುತ್ತಿರುವ ಲಾಂಛನ

ಸಂಸ್ಕೃತಿ ಮತ್ತು ಆಚರಣೆಗಳನ್ನು ಉಳಿಸಲು ಮಹತ್ವದ ಕೊಡುಗೆ ನೀಡುತ್ತಿರುವ ಲಾಂಛನ

Date:

ಭಾರತದ ಮೂಲ ಸಂಸ್ಕೃತಿ ಮತ್ತು ಆಚರಣೆಗಳನ್ನು ಉಳಿಸುವ, ಬೆಳೆಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ 7 ವರ್ಷಗಳಿಂದ ವಿಭಿನ್ನ ರೀತಿಯ ವಿವಿಧ ಸೃಜನಶೀಲ ಕಾರ್ಯಕ್ರಮಗಳನ್ನು ಲಾಂಛನ ಸಂಸ್ಥೆಯು ಸಂಘಟಿಸುತ್ತಾ ಬಂದಿದೆ. 7 ವರ್ಷಗಳ ಹಿಂದೆ ವಿವಿಧ ಕಲಾವಿದರುಗಳ ಚಿತ್ರಕಲಾ ಪ್ರದರ್ಶನ ಮತ್ತು ಛಾಯಾಚಿತ್ರ ಪ್ರದರ್ಶನದಿಂದ ಪ್ರಾರಂಭವಾದ ಕಾರ್ಯಕ್ರಮಗಳು, ನಂತರದ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ ಮತ್ತು ಛಾಯಾಗ್ರಹಣ ಸ್ಪರ್ಧೆಗಳು, ಜಗತ್ಪ್ರಸಿದ್ಧ ಉಡುಪಿಯ ಶ್ರೀ ಕೃಷ್ಣ ಲೀಲೋತ್ಸವದ ವಿಟ್ಲಪಿಂಡಿಯಲ್ಲಿ ಕೃಷ್ಣನ ಹೆಸರಿನಲ್ಲಿ ಮಹಾಸಂಪರ್ಕ ಎನ್ನುವ ಹೆಸರಿನಡಿ ರಾಜ್ಯದ ವಿವಿಧ ಚಿತ್ರ ಕಲಾವಿದರನ್ನು ಕರೆಯಿಸಿ ಉಡುಪಿ ರಥಬೀದಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಚಿತ್ರ ರಚನಾ ಕಾರ್ಯಾಗಾರವನ್ನು ರಚಿಸಿ ಜನಮನ್ನಣೆಗಳಿಸಿತ್ತು.

ನಂತರದ ದಿನಗಳಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಕವನ ಸ್ಪರ್ಧೆ, ರೇಖಾಚಿತ್ರ ರಚನಾ ಸ್ಪರ್ಧೆ, ಚಿತ್ರರಚನಾ ಸ್ಪರ್ಧೆಗಳನ್ನು ಆಯೋಜಿಸಿದ ಲಾಂಛನ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಫೇಸ್ ಪೈಂಟಿಂಗ್ ಸ್ಪರ್ಧೆ ನಡೆಸಿ ಹಲವಾರು ಪ್ರತಿಭೆಗಳ ಅನಾವರಣ ಮಾಡುವಲ್ಲಿ ಯಶಸ್ವಿಯಾಯಿತು.

ನವರಾತ್ರಿಯ ಸಮಯದಲ್ಲಿ ನವದುರ್ಗೆಯರ ರೂಪವನ್ನು ಸರಳವಾಗಿ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಫೋಟೋಶೂಟ್ ನಡೆಸಿ ಲಲಿತಾ ಎನ್ನುವ ಆಲ್ಬಮ್ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ದೀಪಾವಳಿ ಸಂದರ್ಭದಲ್ಲಿ ಗೂಡುದೀಪ ರಚನಾ ಸ್ಪರ್ಧೆ ನಡೆಸಿ ಗೂಡುದೀಪ ರಚನಾ ಕಲೆಯನ್ನು ಮೈಗೂಡಿಸಿಕೊಳ್ಳಲು ಮಹತ್ವದ ಕೊಡುಗೆಯನ್ನು ನೀಡಿತು.

ಕಳೆದ ವರ್ಷದ ಕಾರ್ತಿಕ ಮಾಸದಲ್ಲಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಮಣ್ಣಿನ ಹಣತೆಗಳನ್ನು ಆತ್ಮನಿರ್ಭರತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಲಾ 1008 ಹಣತೆಗಳಂತೆ ಬತ್ತಿ ಮತ್ತು ದೀಪದ ಎಣ್ಣೆಯ ಜೊತೆಗೆ ಹಲವಾರು ದಾನಿಗಳ ನೆರವಿನಿಂದ ಉಡುಪಿ ಜಿಲ್ಲೆಯ ವಿವಿಧ ಸುಮಾರು 88 ದೇವಾಲಯಗಳಿಗೆ ಸುಮಾರು 1 ಲಕ್ಷಕ್ಕೂ ಅಧಿಕ ಹಣತೆಗಳನ್ನು ನೀಡಿತ್ತು.

ಈ ಬಾರಿಯ ನವರಾತ್ರಿಯ ಸಂದರ್ಭದಲ್ಲಿ ಲಾಂಛನ ಸಂಸ್ಥೆಯು ಶ್ರೀ ದೇವಿ ಲಲಿತೆಯು ಸರ್ವೊತ್ಕೃಷ್ಟ ಆತ್ಮ ಶಕ್ತಿ ವಿಶ್ವದಾದ್ಯಂತ ನಡೆಯುವ ಶಕ್ತಿಯ ರಾಸ ಕ್ರೀಡೆಯ ಹಿಂದೆ ಏಕಮೇವ ಅದ್ವಿತೀಯ ಆತ್ಮಶಕ್ತಿ ಇವಳೇ. ಸೃಷ್ಟಿ ಸ್ಥಿತಿ ಲಯದ ಮೂಲ ಶಕ್ತಿಯೂ ಲಲಿತೆಯೇ. ಇವಳಲ್ಲೇ ನವ ರಸ, ನವ ಭಾವಗಳ ಸ್ರೋತ, ಇವಳೇ ನಾನಾ ರೂಪದಲ್ಲಿ ಪ್ರಕಟಗೊಳ್ಳುವವಳು. ಇವಳೇ ವಿಧಾಯಕಳು.

ನವರಾತ್ರಿ ಎನ್ನುವುದು ಇವಳ ಪ್ರಸನ್ನ ಕಾಲ ಎನ್ನುವ ಬಿನ್ನಹಃದಲ್ಲಿ ಅಂಬಲಪಾಡಿ ಶ್ರೀಪತಿ ಆಚಾರ್ಯ ಇವರಿಂದ ರಚಿತವಾದ ಒಂದು ದೇವಿಯ ಶ್ಲೋಕಕ್ಕೆ ಅಡಾಲ್ಫ್ ಜತ್ತನ್ನ ಮತ್ತು ಆದಿತ್ಯ ನಾಯಕ್ ಇವರ ಸಹಕಾರದೊಂದಿಗೆ ಮಾಧವ ಜೋಗಿ ಇವರ ಧ್ವನಿಯಲ್ಲಿ ಒಂದು ಹಾಡು ರಚಿಸಿ ವೀಣಾ, ಚೈತ್ರ, ಸ್ವೀಕೃತಿ, ಸೌಜನ್ಯ, ಶ್ರೇಯಾ, ಸಂಜನಾ ಮತ್ತು ವೈಷ್ಣವಿ ಇವರುಗಳು ಕಲಾವಿದರುಗಳಾಗಿ ಪ್ರಶಾಂತ್ ಉದ್ಯಾವರ ಮುಖವರ್ಣಿಕೆ ಮತ್ತು ಕೌಶಿಕ್ ಚೆಟ್ಟಿಯಾರ್ ಕೆಮಾರಾದಲ್ಲಿ ಶಶಾಂಕ್ ಶಿವತ್ತಾಯ ಹೆಚ್ ಮತ್ತು ತೇಜಸ್ವಿ ಎಸ್ ಆಚಾರ್ಯ ಇವರ ನಿರ್ದೇಶನದಲ್ಲಿ ರಚಿಸಿದ ಲಲಿತಾ ಎನ್ನುವ ವಿಭಿನ್ನ ವೀಡಿಯೋ ಅಲ್ಛಮ್ ಲಾಂಛನ ಎನ್ನುವ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಲಾಂಛನದ ಮುಂದಿನ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಲು ಸಂಪರ್ಕಿಸಿ-
ಶಶಾಂಕ್ ಶಿವತ್ತಾಯ ಹೆಚ್ 9632601459
ತೇಜಸ್ವಿ ಎಸ್ ಆಚಾರ್ಯ 7411521633

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವಕರ್ಮ ಯೋಜನೆಯ ಲಾಭ ಪಡೆದು ಕುಶಲಕರ್ಮಿಗಳು ಉದ್ಯಮಿಗಳಾಗಬಹುದು: ಪ್ರಧಾನಿ ನರೇಂದ್ರ ಮೋದಿ

ವಾರ್ಧಾ, ಸೆ.21: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಲಾಭ ಪಡೆಯುವ ಮೂಲಕ ಕುಶಲಕರ್ಮಿಗಳು...

ಭ್ರಷ್ಟಾಚಾರ ಪ್ರಕರಣ: ಲಾಲು ಪ್ರಸಾದ್ ಯಾದವ್ಗೆ ಸಿಬಿಐ ಬಿಸಿ

ನವದೆಹಲಿ, ಸೆ.21: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮತ್ತು ಮಾಜಿ...

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...
error: Content is protected !!