Monday, February 24, 2025
Monday, February 24, 2025

ಕೋಟ ಮಹಿಳಾ ಮಂಡಳ ವಾರ್ಷಿಕೋತ್ಸವ; ಸಾಧಕರಿಗೆ ಗೌರವ

ಕೋಟ ಮಹಿಳಾ ಮಂಡಳ ವಾರ್ಷಿಕೋತ್ಸವ; ಸಾಧಕರಿಗೆ ಗೌರವ

Date:

ಕೋಟ: ಸಮಾಜಮುಖಿ ಕಾರ್ಯಕ್ಷೇತ್ರದಲ್ಲಿ ಮಹಿಳೆ ಇಂದು ಮಂಚೂಣಿಗೆ ನಿಲ್ಲುತ್ತಿದ್ದಾರೆ. ಒರ್ವ ಗೃಹಿಣಿಯಾಗಿ, ತಾಯಿಯಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾಳೆ ಎಂದು ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.

ಶುಕ್ರವಾರ ಕೋಟ ಮಹಿಳಾ ಮಂಡಳದ 57ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಕಷ್ಟು ವರ್ಷಗಳಿಂದ ಕ್ರಿಯಾಶೀಲ ಚಟುವಟಿಕೆಗಳಿಂದ ಕೂಡಿದ ಮಹಿಳಾ ಮಂಡಳ ತನ್ನ ಸಂಸ್ಥೆಯ ಬೆಳೆವಣಿಗೆ ಜೊತೆಗೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯುತ್ತಿರುವುದು ಸ್ವಾಗತಾರ್ಹ. ಇಂಥಹ ಮಹಿಳಾ ಮಂಡಳಗಳು ಗ್ರಾಮ ಗ್ರಾಮಗಳಲ್ಲಿ ಹುಟ್ಟಿಕೊಳ್ಳುವುದರ ಜೊತೆಗೆ ಅಭಿವೃದ್ಧಿಗೆ ಪ್ರೇರಕವಾಗಲಿ ಎಂದರು.

ಉಪನ್ಯಾಸಕಿ, ಲೇಖಕಿ ಪಾರ್ವತಿ ಐತಾಳ್ ಮಾತನಾಡಿ, ಸುದೀರ್ಘ ಅವಧಿಯ ಮಹಿಳಾ ಮಂಡಳವೊಂದು ಈ ಗ್ರಾಮೀಣ ಭಾಗದಲ್ಲಿ ಕಾರ್ಯಾಚರಿಸುತ್ತಿರುವುದು ಅಚ್ಚರಿಪಡುವ ವಿಚಾರವಾಗಿದೆ.

ಏಕೆಂದರೆ ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಗೆ ಟೊಂಕಕಟ್ಟಿ ಗ್ರಾಮ ಗ್ರಾಮಗಳಲ್ಲಿನ ಮಹಿಳೆಯರನ್ನು ಒಗ್ಗೂಡಿಸಿ ಸ್ವಾವಲಂಬಿ ಬದುಕಿನಡೆಗೆ ಮುನ್ನುಗ್ಗುತ್ತಿರುವುದು ಪ್ರಶಂಸನೀಯ.

ಪಾಶ್ಚಿಮಾತ್ಯ ದೇಶಗಳಲ್ಲಿನ ಮಹಿಳೆಯರ ಬದಲಾವಣೆಯಿಂದ ನಮ್ಮ ದೇಶದಲ್ಲೂ ಇದರ ಕ್ರಾಂತಿ ಪಸರಿಸಿಕೊಂಡಿದೆ. ಈ ಮೂಲಕ ಮಹಿಳಾ ಮಂಡಳಗಳು ಹುಟ್ಟಿಕೊಳ್ಳಲು ಸಹಕಾರಿಯಾಗಿದೆ.

ಹಿಂದಿನ ಕಾಲಘಟ್ಟದಲ್ಲಿ ಮಹಿಳೆ ಮನೆಯಲ್ಲೆ ತಾಯ್ತನದ ಜೊತೆಗೆ ಗೃಹಿಣಿಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಹೊರಜಗತ್ತಿನಡೆಗೆ ಗುರುತಿಸಿಕೊಂಡಿರಲ್ಲಿಲ್ಲಾ, ಆದರೆ ಇಂದು ಪುರುಷನಿಗೆ ಸಮಾನವಾಗಿ ಕಾರ್ಯನಿರ್ವಹಿಸುವ ಜೊತೆಗೆ ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾಳೆ.

ಒಂದು ಸಂಸ್ಥೆ ಕಟ್ಟುವುದು ಸುಲಭ, ಆದರೆ ಅದನ್ನು ನಿರಂತವಾಗಿ ಕೊಂಡೊಯ್ಯುವುದು ಕಷ್ಟಕರ. ಈ ನಿಟ್ಟಿನಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸಿ ಎಲ್ಲರನ್ನೂ ಸಮಾನರಾಗಿ ಕೊಂಡ್ಯೊಯುವ ಕಾರ್ಯ ಶ್ಲಾಘನೀಯ ಎಂದರು.

ವಿವಿಧ ಕ್ಷೇತ್ರಗಳಲ್ಲಿನ ಸಾಧಕ ಹಾಗೂ ಮಹಿಳಾ ಮಂಡಳದ ಅಭಿವೃದ್ಧಿಗೆ ಕೈಜೋಡಿಸಿದ ಮಹನಿಯರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇ.ಮೂ.ಮಧುಸೂಧನ ಬಾಯಿರಿ, ಕೋಟದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಶೆಣೈ, ಎಂ.ಸುಬ್ರಾಯ ಆಚಾರ್ಯ, ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ವೈದ್ಯ ಡಾ. ಎಸ್ ಎನ್ ವಾದಿರಾಜ್, ಎ.ಪಿ.ಎಮ್.ಸಿ ಉಪಾಧ್ಯಕ್ಷ ಕೃಷ್ಣಪೂಜಾರಿ ಪಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಸಮಾಜಸೇವಕ ಆನಂದ್ ಸಿ ಕುಂದರ್, ಮಹಿಳಾ ಸಾಧಕಿಯರಾದ ಭಾರತೀ ಮಯ್ಯ, ಲೇಖಕಿ ಪಾರ್ವತಿ ಐತಾಳ್ ಇವರುಗಳನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಮಹಿಳಾ ಮಂಡಳ ಅಧ್ಯಕ್ಷೆ ಸುಶೀಲ ಸೋಮಶೇಖರ್ ವಹಿಸಿದ್ದರು. ಅಶಕ್ತ ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ನೀಡಲಾಯಿತು. ಮಹಿಳಾ ಮಂಡಳದ ಉಪಾಧ್ಯಕ್ಷೆ ಗೀತಾ ಎ ಕುಂದರ್ ಉಪಸ್ಥಿತರಿದ್ದರು.

ಮಹಿಳಾ ಮಂಡಳದ ಸುಜಾತ ಬಾಯಿರಿ, ವನೀತಾ ಉಪಾಧ್ಯ ಸನ್ಮಾನಪತ್ರ ವಾಚಿಸಿದರು. ಮಹಿಳಾ ಮಂಡಳದ ಕೋಶಾಧಿಕಾರಿ ಭಾಗ್ಯ ವಾದಿರಾಜ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!