ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ದೇಗುಲದಲ್ಲಿ ಅ 7ರಿಂದ 15ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು.
ನಗರಸಭೆ ಪೌರಾಯುಕ್ತ ಡಾ. ಉದಯ ಶೆಟ್ಟಿ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರವಿರಾಜ ವಿ. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭೆ ಸದಸ್ಯೆ ಗೀತಾ ಶೇಟ್, ದೇಗುಲದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ವ್ಯ.ಸ. ಸದಸ್ಯರಾದ ನಾಗರಾಜ ಶೆಟ್ಟಿ, ಕೆ. ಮಂಜುನಾಥ್ ಹೆಬ್ಬಾರ್, ಕಿಶೋರ್ ಸಾಲ್ಯಾನ್, ರಮೇಶ್ ಶೇರಿಗಾರ್, ಗಣೇಶ್ ನಾಯ್ಕ್, ಸಂಧ್ಯಾ ಪ್ರಭು, ಶಶಿಕಲಾ ಭರತ್, ಕೆ. ದುರ್ಗಾಪ್ರಸಾದ್ ಉಪಾಧ್ಯ, ಸೌಮ್ಯ ಉದಯ ಶೆಟ್ಟಿ, ಕಾತ್ಯಾಯಿನಿ ಭಜನಾ ಮಂಡಳಿ ಸದಸ್ಯರು ಸ್ಥಳೀಯರು ಉಪಸ್ಥಿತರಿದ್ದರು.
ನವರಾತ್ರಿ ಪರ್ವಕಾಲದಲ್ಲಿ ನಿರಂತರ ನಡೆಯಲಿರುವ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇಗುಲದ ವತಿಯಿಂದ ಡಾ. ಉದಯ ಶೆಟ್ಟಿ ಅವರನ್ನು ಗೌರವಿಸಲಾಯಿತು. ಚಂಡಿಕಾಯಾಗದ ಪೂರ್ಣಾಹುತಿಯ ನಂತರ ಪ್ರಸಾದ ವಿತರಿಸಲಾಯಿತು. ನವರಾತ್ರಿಯ ಮೊದಲ ದಿನ ಕಲ್ಪೋಕ್ತ ಪೂಜೆ, ಬಲಿ, ನವರಾತ್ರಿ ಉತ್ಸವ, ಮಹಾಪೂಜೆ, ಹೂವಿನ ಪೂಜೆ ಇತರ ಸೇವಾ ಪೋಜೆಗಳು ನೆರವೇರಿತು.