ಮಣಿಪಾಲ: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಇನ್ಸ್ಟ್ರಮೆಂಟೇಷನ್ ಆಂಡ್ ಕಂಟ್ರೋಲ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಕೆ. ರಾಮಕೃಷ್ಣ ಕಿಣಿ ಅವರು ಮಂಡಿಸಿದ “ಮಲ್ಟಿವೇರಿಯೆಟ್ ಪ್ರೋಸೆಸ್ ಮಾನಿಟರಿಂಗ್ ಯೂಸಿಂಗ್ ಮಲ್ಟಿಸ್ಕೇಲ್ ವರ್ಷನ್ ಆಫ್ ಐಸಿಎ” ಎಂಬ ಸಂಶೋಧನ ಪ್ರಭಂದಕ್ಕೆ ಮಾಹೆ ಸಂಸ್ಥೆಯು ಪಿಎಚ್ ಡಿ ನೀಡಿದೆ.
ಅವರು ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ (ಡಾ). ಮುದ್ದು ಮದಕಯಾರು ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಇವರು ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಅನಂತಪದ್ಮನಾಭ ಕಿಣಿ ಹಾಗೂ ಅಹಲ್ಯ ಕಿಣಿ ಅವರ ಪುತ್ರ.