ಮಣಿಪಾಲ: ಅಂತರರಾಷ್ಟ್ರೀಯ ಸೋಂಕು ತಡೆಗಟ್ಟುವ ವಾರವನ್ನು ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಮತ್ತು ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಆಸ್ಪತ್ರೆಯ ಸೋಂಕು ನಿಯಂತ್ರಣ ಸಮಿತಿಯು ಹಾಗೂ ಶುಶ್ರೂಷಾ ಸೇವೆಗಳ ಸಹಯೋಗದೊಂದಿಗೆ 18 ರಿಂದ 23 ಅಕ್ಟೋಬರ್ 2021 ರವರೆಗೆ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ (ಐಪಿಸಿ) ಕುರಿತು ಜಾಗೃತಿ ಮೂಡಿಸಲು ಆಯೋಜಿಸಿದೆ.
ಇದರ ಸಮಾರೋಪ ಸಮಾರಂಭವು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ನಡೆಯಿತು. ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಸೇವಾ ಪೂರೈಕೆದಾರರು ಸೇರಿದಂತೆ ವಿವಿಧ ವಿಭಾಗಗಳ 100ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ). ಎಂ.ಡಿ.ವೆಂಕಟೇಶ್ ಭಾಗವಹಿಸಿದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಐಐಪಿಡಬ್ಲ್ಯೂ, ಮತ್ತು ಹೆಚ್.ಐ.ಸಿ.ಸಿ ಯ ಪ್ರಯಾಣದ ಅವಲೋಕನವನ್ನು ಹೆಚ್.ಐ.ಸಿ.ಸಿ ಅಧ್ಯಕ್ಷರಾದ ಡಾ. ಮುರಳೀಧರ ವರ್ಮಾ ನೀಡಿದರು. ಡಾ. ಅನಿಲ್ ಕೆ ಭಟ್, ಕೆಎಂಸಿ ಮಣಿಪಾಲದ ಸಹ ಡೀನ್, ಹೆಚ್.ಐ.ಸಿ.ಸಿ ಮತ್ತು ನರ್ಸಿಂಗ್ ಸೇವೆಗಳ ಇಲಾಖೆ ಕೈಗೊಂಡ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ಶ್ಲಾಘಿಸಿದರು.
ಲೆಫ್ಟಿನೆಂಟ್ ಜನರಲ್ (ಡಾ). ಎಂ.ಡಿ.ವೆಂಕಟೇಶ್ ಅವರು ಐಪಿಸಿ ಪ್ರೈಮರ್, ಪಿಜಿ ಪ್ರಮಾಣೀಕರಣ ಕೋರ್ಸ್ ಅನ್ನು ಉದ್ಘಾಟಿಸಿ, ವೈದ್ಯರು, ದಾದಿಯರು, ಗೃಹರಕ್ಷಕ ಸಿಬ್ಬಂದಿ ಮತ್ತು ತಂತ್ರಜ್ಞರನ್ನು ಒಳಗೊಂಡ ಹೆಚ್.ಐ.ಸಿ.ಸಿ ಯ ಬಹುಮುಖಿ ವಿಧಾನವನ್ನು ಶ್ಲಾಘಿಸಿದರು. ಸೋಂಕು ನಿಯಂತ್ರಣವು ಒಬ್ಬ ವ್ಯಕ್ತಿಯ ಪ್ರಯತ್ನವಲ್ಲ ಬದಲಿಗೆ ಇದು ತಂಡದ ಪ್ರಯತ್ನ ಎಂಬ ಅಂಶ ಎಂದು ತಿಳಿಸಿದರು.
ಹೆಚ್.ಐ.ಸಿ.ಸಿ ಹಾಗೂ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕೈಜೋಡಿಸಿ, ಎಂಐಸಿ ನಿರ್ದೇಶಕರು ಮತ್ತು ಪ್ರಾಧ್ಯಾಪಕರಾದ ಡಾ. ಪದ್ಮಾ ರಾಣಿ, ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ಜಾಗೃತಿ ಮೂಡಿಸಲು ಶೈಕ್ಷಣಿಕ ವೀಡಿಯೊವನ್ನು ರಚಿಸಿದ್ದರು.
ಐಐಪಿಡಬ್ಲ್ಯೂ ನ ಭಾಗವಾಗಿ, ರೋಗಿಗಳು ಮತ್ತು ಅವರ ಸಂಬಂಧಿಕರಿಗಾಗಿ ಪಾತ್ರಾಭಿನಯ, ಗೃಹರಕ್ಷಕ ಸಿಬ್ಬಂದಿಗಳಿಗೆ ರಸಪ್ರಶ್ನೆ ಸ್ಪರ್ಧೆಗಳು, ದಾದಿಯರಿಗೆ ಪ್ರಕರಣ ಪ್ರಸ್ತುತಿ ಮತ್ತು ಸೋಂಕು ನಿಯಂತ್ರಣದ ಕುರಿತು ತಂತ್ರಜ್ಞರ ಜಾಗೃತಿಯನ್ನು ಆಯೋಜಿಸಲಾಗಿದೆ.
ಇದರ ನಂತರ ನಡೆದ ವೆಬಿನಾರ್ ನಲ್ಲಿ ಯುಎಸ್ಎ, ಮಲೇಷ್ಯಾ ಮತ್ತು ಭಾರತ ಸೇರಿದಂತೆ ವಿವಿಧ ದೇಶಗಳ ಭಾಷಣಕಾರರು ಭಾಗವಹಿಸಿದರು ಮತ್ತು ಸೋಂಕು ನಿಯಂತ್ರಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಿವಿಧ ಕಾರ್ಯಕ್ರಮಗಳ ವಿಜೇತರು ಮತ್ತು ಭಾಗವಹಿಸುವವರಿಗೆ ಪ್ರಶಸ್ತಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಕೆಎಂಸಿ ಮಣಿಪಾಲದ ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಡಾ ಪಿ ಸುಬಾ ಸೂರಿಯಾ ಧನ್ಯವಾದ ಅರ್ಪಿಸಿದರು.
2002 ರಲ್ಲಿ ಹೆಚ್.ಐ.ಸಿ.ಸಿ ಯನ್ನು ಪರಿಚಯಿಸಿದ ಭಾರತದಲ್ಲಿನ ಮೊದಲ ವಿಶ್ವವಿದ್ಯಾನಿಲಯ ಆಸ್ಪತ್ರೆಗಳಲ್ಲಿ ಮಣಿಪಾಲವು ಒಂದಾಗಿವೆ. ಐಐಪಿಡಬ್ಲ್ಯೂಸಂದರ್ಭದಲ್ಲಿ ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೆಮ್ಮೆಯ ವಿಷಯವಾಗಿದೆ.
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಸೋಂಕನ್ನು ಕಡಿಮೆ ಮಾಡಲು ಮತ್ತು ಉತ್ತಮ ರೋಗಿಗಳ ಆರೈಕೆಗಾಗಿ ದಣಿವಿಲ್ಲದೆ ಕೆಲಸ ಮಾಡುತ್ತಿದೆ. ಈ ಸಮಾರಂಭವು ನಮ್ಮ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಅಭ್ಯಾಸಗಳಲ್ಲಿ ಒಂದು ಮೈಲಿಗಲ್ಲು ಮತ್ತು ಉತ್ತಮ ನಾಳೆಗಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ನಮ್ಮನ್ನು ಉತ್ತೇಜಿಸುತ್ತದೆ ಎಂದು ಕೆ.ಎಂ.ಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹೇಳಿದ್ದಾರೆ.