ಬ್ರಹ್ಮಾವರ: ಚೈತನ್ಯ ಯುವಕ ಮಂಡಲ (ರಿ.) ನೀಲಾವರ ಇವರ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಯಿತು. ಧ್ವಜಾರೋಹಣಗೈದ ನಿವೃತ್ತ ಸೇನಾನಿ ಹಾಗೂ ಕೃಷಿಕ ಸೀತಾರಾಮ ಪ್ರಭು ತ್ಯಾಗ ಬಲಿದಾನ ಗಳಿಂದ ಪಡೆದ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ಪ್ರಗತಿಯ ಗುರಿಯನ್ನು ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಜನತೆ ಕಾರ್ಯಪ್ರವತ್ತಾರಾಗಬೇಕೆಂದು ಕರೆಯಿತ್ತರು.
ಸಂಪನ್ಮೂಲ ಭಾಷಣಗೈದ ಉಪನ್ಯಾಸಕ ಪ್ರಶಾಂತ್ ನೀಲಾವರ, ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು, ಪ್ರಗತಿಗೆ ಕಾರಣರಾದ ವಿಜ್ಞಾನಿಗಳನ್ನು ದೇಶ ಕಾಯುವ ಸೇನಾನಿಗಳನ್ನು ಅನ್ನ ಕೊಡುವ ರೈತನನ್ನು ಜೀವ ರಕ್ಷಿಸುವ ವೈದ್ಯರನ್ನು ಮುಂದಿನ ಜನಾಂಗ ಸೃಷ್ಟಿಸುವ ಶಿಕ್ಷಕರನ್ನು, ಸಂವಿಧಾನದ ನಿರ್ಮಾತರನ್ನು ದೂರದೃಷ್ಟಿಯ ರಾಜಕೀಯ ಮುತ್ಸದ್ದಿಗಳನ್ನು ದಕ್ಷ ಅಧಿಕಾರಿಗಳ ಸೇವೆಯನ್ನು ಹಾಗೂ ಕ್ರೀಡೆ, ಸಂಸ್ಕೃತಿ ಸಾಹಿತ್ಯದಲ್ಲಿಯ ಸಾಧಕರನ್ನು ಸ್ಮರಿಸೋಣವೆಂದರು.
ಯುವಕ ಮಂಡಲದ ಗೌರವಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್ ಮಾತನಾಡುತ್ತಾ, ನಾವೆಲ್ಲ ನಾಗರಿಕ ಜವಾಬ್ದಾರಿಗಳನ್ನು ನಿರ್ವಹಿಸಿ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಸಹಕರಿಸೋಣವೆಂದರು. ಅತಿಥಿಗಳಾದ ಚಂದ್ರಶೇಖರ ಆಚಾರ್ಯ ಶುಭ ಹಾರೈಸಿದರು. ಕಾರ್ಯದರ್ಶಿ ಹರೀಶ್ ಆಚಾರ್ಯ ಸ್ವಾಗತಿಸಿ, ಉಪಾಧ್ಯಕ್ಷ ರಾಘವೇಂದ್ರ ದೇವಾಡಿಗ ಧನ್ಯವಾದಗೈದರು. ಖಜಾಂಚಿ ಮಧುಸೂದನ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಚೈತನ್ಯದ ಸದಸ್ಯರ ಜೊತೆ ಗ್ರಾಮಸ್ಥರು ಹಾಗೂ ಎಲ್ಲಂಪಳ್ಳಿ ವಿಷ್ಣುಮೂರ್ತಿ ಕ್ರಿಕೆಟರ್ಸ್ ಹಾಗೂ ಎಂಎಂಸಿ ಸದಸ್ಯರೂ ಭಾಗವಹಿಸಿದರು. ನೀಲಾವರ ಗ್ರಾಮ ಪಂಚಾಯತ್ ಸಿಹಿ ತಿಂಡಿ ಕೊಡುಗೆ ನೀಡಿದರೆ ಸುದಿನ ದೇವಾಡಿಗ ತಂಪು ಪಾನಿಯ ಪ್ರಾಯೋಜಿಸಿದರು.