ಉಡುಪಿ: ಪ್ರಜಾಪ್ರಭುತ್ವದಲ್ಲಿ ಸ್ವಾಮೀಜಿಗಳು ಹಿರಿಯರು ತಮ್ಮ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರೆ ಅದನ್ನು ಗೌರವಿಸಬೇಕಾದ ಅನಿವಾರ್ಯತೆಯನ್ನೂ ಗಮನದಲ್ಲಿಟ್ಟುಕೊಂಡು, ಭಾರತೀಯ ಜನತಾ ಪಾರ್ಟಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ನಾನು ಮತ್ತು ನನ್ನಂಥವರು ಯೋಚನೆ ಮಾಡುವುದು ಏನೆಂದರೆ, ನಮ್ಮನ್ನು ಬೆಳೆಸಿದ ಪಾರ್ಟಿ, ಪಾರ್ಟಿಯನ್ನು ಕಟ್ಟಿ ಬೆಳೆಸಿದ ಹಿರಿಯರು ನಮಗೆ ಮಾರ್ಗದರ್ಶನ ನೀಡಿ, ಅನುಭವದ ಬುತ್ತಿಯನ್ನು ಕಟ್ಟಿಕೊಟ್ಟು, ನಮ್ಮ ಕೆಲಸಗಳಿಗೆ ಪ್ರೇರಣೆ ನೀಡಿ, ನಮ್ಮಂತಹ ಸಾಮಾನ್ಯ ಕಾರ್ಯಕರ್ತರಿಗೆ ಬಹುದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಂತಹ ನಮ್ಮ ಹಿರಿಯರು, ನಮ್ಮ ಹೈಕಮಾಂಡ್, ನಮ್ಮ ಪಾರ್ಟಿ, ನಮ್ಮ ರಾಜ್ಯಧ್ಯಕ್ಷರು, ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ಮಾತ್ರ ನಾವು ಬದ್ಧ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಯಾರ್ಯಾರು ಏನೇನು ಹೇಳಿಕೆ ನೀಡುತ್ತಾರೋ ಅದನ್ನು ಗೌರವಿಸೋಣ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರವರ ಹೇಳಿಕೆ ಕೊಡುವಂತಹ ಅಧಿಕಾರ ಅವಕಾಶಗಳಿರುತ್ತವೆ ಎಂದು ಸಚಿವ ಕೋಟ ಹೇಳಿದರು.